ಬೈಂದೂರು: ಬಸ್ ಪ್ರಯಾಣದಲ್ಲೇ ವ್ಯಕ್ತಿ ಮೃತ್ಯು
ಬೈಂದೂರು, ಮೇ 27: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಪ್ರಯಾಣದಲ್ಲೇ ಮೃತಪಟ್ಟ ಘಟನೆ ಮೇ 26ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಕಂಬದಕೋಣೆ ನಿವಾಸಿ ಸೋಮ ಎಂದು ಗುರುತಿಸಲಾಗಿದೆ. ಇವರು ಎಪಿಎಂ ಬಸ್ಸಿನಲ್ಲಿ ತ್ರಾಸಿಯಲ್ಲಿ ಹತ್ತಿ ಕಂಬದಕೋಣೆಗೆ ಟಿಕೆಟ್ ಮಾಡಿದ್ದು ಬೈಂದೂರು ತಲುಪುವ ಮಧ್ಯೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಹೃದಯಾಘಾತ ಅಥವಾ ಇನ್ನಿತರ ಯಾವುದೇ ಕಾರಣದಿಂದ ಮೃತಪಟ್ಟಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





