ಕೇರಳ: ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಹಾಡುತ್ತಾ ಕುಸಿದು ಬಿದ್ದು ಪೊಲೀಸ್ ಅಧಿಕಾರಿ ಮೃತ್ಯು
ಸಾವಿನ ಬಗ್ಗೆ ಮಗಳಿಗೆ ಮಾಹಿತಿ ನೀಡದೆ ಮದುವೆ ನೆರವೇರಿಸಿದ ಮನೆಯವರು

ಹೊಸದಿಲ್ಲಿ, ಮೇ 27: ತನ್ನ ಕಿರಿಯ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಿದ್ದ ವೇಳೆ ಸಬ್ ಇನ್ಸ್ ಪೆಕ್ಟರ್ ಒಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.
ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ತಿರುವನಂತಪುರಂನ ಕರಮಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿ. ವಿಷ್ಣುಪ್ರಸಾದ್ ಕುಸಿದು ಬಿದ್ದು ಮೃತಪಟ್ಟವರು.
ಹಾಡು ಹಾಡುತ್ತಲೇ ವಿಷ್ಣುಪ್ರಸಾದ್ ಕುಸಿದು ಬೀಳುವ ವಿಡಿಯೋವನ್ನು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಸೆರೆಹಿಡಿದಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ. ವಿಷ್ಣುಪ್ರಸಾದ್ ‘ಅಮರಂ’ ಚಿತ್ರದ ಹಾಡನ್ನು ಹಾಡುತ್ತಾ ಕುಸಿದು ಬಿದ್ದಿದ್ದು, ಈ ಹಾಡನ್ನು ಚಿತ್ರದಲ್ಲಿ ಮಮ್ಮುಟ್ಟಿ ತಮ್ಮ ಪುತ್ರಿಗಾಗಿ ಹಾಡುವ ದೃಶ್ಯವಿತ್ತು.
ತಂದೆಯ ಸಾವಿನ ಬಗ್ಗೆ ಪುತ್ರಿಯ ಮಾಹಿತಿ ನೀಡಿರಲಿಲ್ಲ. ಮರುದಿನ ಆಕೆಯ ಮದುವೆ ನಡೆದಿದ್ದು, ಆಕೆ ತಂದೆಯ ಬಗ್ಗೆ ವಿಚಾರಿಸಿದಾಗ ಅವರು ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ ಎನ್ನಲಾಗಿತ್ತು.
Next Story







