ಉಡುಪಿ: ಮೇ 30ಕ್ಕೆ ತನಿಷ್ಕ್ ನೂತನ ಶೋರೂಮ್ ಉದ್ಘಾಟನೆ
ಉಡುಪಿ, ಮೇ 27: ದೇಶದ ಅತ್ಯಂತ ವಿಶ್ವಾಸಾರ್ಹ ಜುವೆಲ್ಲರಿ ಬ್ರಾಂಡ್ ಆಗಿರುವ ‘ತನಿಷ್ಕ್’ನ ನೂತನ ಶೋರೂಮ್ ಒಂದು ಮೇ 30ರಂದು ದೇವಾಲಯಗಳ ನಗರವಾಗಿರುವ ಉಡುಪಿಯಲ್ಲಿ ಪ್ರಾರಂಭಗೊಳ್ಳಲಿದೆ ಎಂದು ತನಿಷ್ಕ್‌ನ ಮ್ಯಾನೇಜಿಂಗ್ ಪಾರ್ಟನರ್ ಸಂತೋಷ್ ಜಾಧವ್ ತಿಳಿಸಿದ್ದಾರೆ.
ಟಾಟಾ ಸಮೂಹಕ್ಕೆ ಸೇರಿರುವ ‘ತನಿಷ್ಕ್’ ದೇಶದಲ್ಲಿ ಹೊಂದಿರುವ 291ನೇ ರಿಟೈಲ್ ಮಳಿಗೆ ಇದಾಗಿದ್ದು, ಹೊಟೇಲ್ ರಾಮಕೃಷ್ಣ ಎದುರಿಗಿರುವ ಮಡಿ ಸಂಕೀರ್ಣದಲ್ಲಿರುವ ಮಳಿಗೆಯನ್ನು ಮೇ 30ರ ಗುರುವಾರ ಬೆಳಗ್ಗೆ 10:00 ಗಂಟೆಗೆ ತನಿಷ್ಕ್‌ನ ರಿಟೈಲ್ ಹೆಡ್ ಹಾಗೂ ಟೈಟಾನ್‌ನ ಉಪಾಧ್ಯಕ್ಷ ಅರುಣ್ ನಾರಾಯಣ ಉದ್ಘಾಟಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಕೇಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ದೇಶದ ವಿಶ್ವಸನೀಯ ಬ್ರಾಂಡ್ ಎನಿಸಿರುವ ತನಿಷ್ಕ್‌ನ ವಿಶಾಲವಾದ, ಅಕರ್ಷಕವಾಗಿ ಸಜ್ಜುಗೊಳಿಸಿರುವ ಉಡುಪಿ ಮಳಿಗೆಯಲ್ಲಿ 3000ಕ್ಕೂ ಅಧಿಕ ವಿನ್ಯಾಸದ ಚಿನ್ನ, ವಜ್ರ, ಪ್ಲಾಟಿನಂ, ಏಕರತ್ನಾಭರಣ, ಅತ್ಯಾಕರ್ಷಕ ವಿವಾಹದ ಆಭರಣಗಳು ಹಾಗೂ ಭಾರೀ ಬೆಲೆಬಾಳುವ ವಜ್ರಾಭರಣಗಳು ಲಭ್ಯವಿದೆ ಎಂದು ಉಡುಪಿ ತನಿಷ್ಕ್‌ನ ಮ್ಯಾನೇಜರ್ ಸಂದೀಪ್ ಶೆಟ್ಟಿ ನುಡಿದರು.
ಈ ಹೊಸ ಮಳಿಗೆಯಲ್ಲಿ ತನಿಷ್ಕ್‌ನ ವಿವಿಧ ವಿನ್ಯಾಸಗಳ ಗುಲ್‌ನಾಝ್, ಪ್ರೀಣ್‌ನ ಸಂಗ್ರಹಗಳು ಲಭ್ಯವಿದೆ. ಉದ್ಘಾಟನಾ ಕೊಡುಗೆಯಾಗಿ ಜೂ.1ರವರೆಗೆ ಪ್ರತಿಯೊಂದು ಖರೀದಿಯೊಂದಿಗೆ ಚಿನ್ನದ ನಾಣ್ಯಗಳನ್ನು ಉಚಿತವಾಗಿ ನೀಡಲಾಗುವುದು. ಹಳೆ ಚಿನ್ನಾಭರಣಗಳಿಗೆ ಶೇ.100 ವಿನಿಮಯ ದರ ನೀಡಲಾಗುವುದು. ಚಿನ್ನಾಭರಣ ಹಾಗೂ ವಜ್ರಾಭರಣಗಳಿಗೆ ಶೇ.25ರಷ್ಟು ಮೇಕಿಂಗ್ ಶುಲ್ಕದಲ್ಲಿ ರಿಯಾಯಿತಿಯನ್ನು ನೀಡಲಾಗುವುದು ಎಂದು ಸಂತೋಷ್ ಜಾಧವ ನುಡಿದರು.
ಉಡುಪಿ ಶೋರೂಮ್‌ನ ಫ್ಲೋರ್ ಮ್ಯಾನೇಜರ್ ನವೀನ್‌ಕುಮಾರ್ ಉಪಸ್ಥಿತರಿದ್ದರು.







