ಚಿತ್ರ ನಿರ್ದೇಶಕ ಅಜಯ್ ದೇವಗನ್ ತಂದೆ ವೀರು ದೇವಗನ್ ವಿಧಿವಶ

ಮುಂಬೈ, ಮೇ.27: ಬಾಲಿವುಡ್ ನಟ ಅಜಯ್ ದೇವಗನ್ ಅವರ ತಂದೆ ಚಿತ್ರ ನಿರ್ದೇಶಕ ವೀರು ದೇವಗನ್ ಸೋಮವಾರ ಮುಂಬೈಯಲ್ಲಿ ವಿಧಿವಶರಾಗಿದ್ದಾರೆ ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಿಡ್ ಡೇ ಪತ್ರಿಕೆಯ ವರದಿ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿದ್ದ ವೀರು ದೇವಗನ್ ಅವರನ್ನು ಮುಂಬೈಯ ಸಂತಕ್ರೂಝ್‌ನಲ್ಲಿರುವ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅಂತ್ಯಕ್ರಿಯೆಯನ್ನು ಸೋಮವಾರ ಸಂಜೆ ವಿಲೆ ಪಾರ್ಲೆಯ ರುದ್ರಭೂಮಿಯಲ್ಲಿ ನಡೆಸಲಾಯಿತು. ಆ್ಯಕ್ಷನ್ ನಿರ್ದೇಶಕರಾಗಿದ್ದ ವೀರು ದೇವಗನ್ 80ಕ್ಕೂ ಅಧಿಕ ಸಿನೆಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 1999ರಲ್ಲಿ ಅಮಿತಾಬ್ ಬಚ್ಚನ್, ಅಜಯ್ ದೇವಗನ್ ಮತ್ತು ಮನೀಶಾ ಕೊಯಿರಾಲ ಅಭಿನಯದ ಹಿಂದೂಸ್ಥಾನ್ ಕಿ ಕಸಮ್ ಸಿನೆಮಾವನ್ನು ನಿರ್ದೇಶಿಸಿದ್ದರು.
Next Story