ವಿದ್ಯಾರ್ಥಿನಿ ಮಧು ನಿಗೂಡ ಸಾವು: ಆರೋಪಿಯ ನ್ಯಾಯಾಂಗ ಬಂಧನದ ಅವಧಿ 2ನೆ ಬಾರಿ ವಿಸ್ತರಣೆ

ರಾಯಚೂರು, ಮೇ 27: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುದರ್ಶನ್ ಯಾದವ್ ನ್ಯಾಯಾಂಗ ಬಂಧನವನ್ನು ಜೂ.7ರ ವರೆಗೆ ಮುಂದೂಡಲಾಗಿದೆ.
ಮಧು ಪತ್ತಾರ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದ ರಾಯಚೂರು ಪೊಲೀಸರು, ಆರೋಪಿ ಸುದರ್ಶನ್ ಯಾದವ್‌ನನ್ನು ಬಂಧಿಸಿದ್ದರು. ಬಳಿಕ ಕೇಸ್ ಸಿಐಡಿಗೆ ವರ್ಗವಾಗಿತ್ತು. ವಿಚಾರಣೆ ಪೂರ್ಣಗೊಂಡ ಹಿನ್ನೆಲೆ ಸಿಐಡಿ ತಂಡ ಮೇ 2ರಂದು ಆರೋಪಿಯನ್ನು ನ್ಯಾಯಾಂಗಕ್ಕೆ ಒಪ್ಪಿಸಿತ್ತು. ಆಗ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿತ್ತು.
ಸೋಮವಾರ ಆರೋಪಿ ಸುದರ್ಶನ್ ಯಾದವ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿದೆ. ಈ ಕಾರಣ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇನ್ನೂ ವಿಚಾರಣೆ ಇರುವ ಕಾರಣ ರಾಯಚೂರು ನಗರದ 3ನೆ ಜೆಎಂಎಫ್‌ಸಿ ನ್ಯಾಯಾಧೀಶ ಅವಿನಾಶ್, ಆರೋಪಿಯ ನ್ಯಾಯಾಂಗ ಬಂಧನದ ಅವಧಿಯನ್ನು ಎರಡನೇ ಬಾರಿ ವಿಸ್ತರಿಸಿದ್ದಾರೆ.
Next Story





