ಬ್ರಹ್ಮಾವರ: ಯುವತಿಯ ಮೊಬೈಲ್ ಕಸಿದು ಪರಾರಿ
ಬ್ರಹ್ಮಾವರ, ಮೇ 27: ರಸ್ತೆ ಬದಿ ನಡೆದುಕೊಂಡು ಮಾತನಾಡುತ್ತ ಹೋಗು ತ್ತಿದ್ದ ಯುವತಿಯ ಕೈಯಲ್ಲಿದ್ದ ಮೊಬೈಲ್‌ನ್ನು ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಕಸಿದು ಪರಾರಿಯಾಗಿರುವ ಘಟನೆ ಮೇ 27ರಂದು ಬೆಳಗ್ಗೆ 8.45ರ ಸುಮಾರಿಗೆ ಹಂದಾಡಿ ಗ್ರಾಮದ ಕಲ್ಲಬೆಟ್ಟು ಎಂಬಲ್ಲಿ ನಡೆದಿದೆ.
ಹಂದಾಡಿ ಗ್ರಾಮದ ಕಲ್ಲಬೆಟ್ಟು ನಿವಾಸಿ ಎಚ್.ಆರ್.ಶೆಣೈ ಎಂಬವರ ಮಗಳು ರಕ್ಷಾ(21) ಎಂಬಾಕೆ ಮನೆಯಿಂದ ಕೆಲಸಕ್ಕೆಂದು ಹೊರಟು ಮೊಬೈಲ್ ನಲ್ಲಿ ಮಾತನಾಡುತ್ತಾ ನಡೆದುಕೊಂಡು ಬ್ರಹ್ಮಾವರ ಪೇಟೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ರಕ್ಷಾ ಅವರ ಕೈಯಲ್ಲಿದ್ದ ಮೊಬೈಲ್‌ನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಮೊಬೈಲ್ ಮೌಲ್ಯ 8,300ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





