ಬೋರುಗುಡ್ಡೆ: ಬದ್ರಿಯಾ ಹಯಾತುಲ್ ಇಸ್ಲಾಮ್ ಮದರಸಕ್ಕೆ ಶೇ100 ಪಲಿತಾಂಶ, ರೇಂಜ್ ಮಟ್ಟದಲ್ಲಿ ಸಾಧನೆ
ಮಂಗಳೂರು ಮೇ 26: ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಅಂಗೀಕ್ರತ ಬದ್ರಿಯಾ ಹಯಾತುಲ್ ಇಸ್ಲಾಮ್ ಮದರಸ ಬೋರುಗಡ್ಡೆಗೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ 100 ಪಲಿತಾಂಶ ಬಂದಿದೆ.
5 ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಒಟ್ಟು 26 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಡಿಸ್ಟಿಂಕ್ಷನ್ ನಲ್ಲಿ 2, ಪ್ರಥಮ ಶ್ರೇಣಿಯಲ್ಲಿ 3, ದ್ವಿತೀಯ 6, ತ್ರತೀಯ 15 ವಿಧ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 7 ನೇ ತರಗತಿಯಲ್ಲಿ ಒಟ್ಟು 12 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಡಿಸ್ಟಿಂಕ್ಷನ್ ನಲ್ಲಿ 1, ಪ್ರಥಮ ಶ್ರೇಣಿಯಲ್ಲಿ 3, ದ್ವಿತೀಯ 1, ತ್ರತೀಯ 7 ವಿಧ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 10 ನೇ ತರಗತಿಯಲ್ಲಿ ಒಟ್ಟು 7 ಏಳು ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಡಿಸ್ಟಿಂಕ್ಷನ್ ನಲ್ಲಿ 3, ಪ್ರಥಮ ಶ್ರೇಣಿಯಲ್ಲಿ 4 ವಿಧ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 12ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಒಟ್ಟು 2 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಪ್ರಥಮ ಶ್ರೇಣಿಯಲ್ಲಿ ಫಾತಿಮ ಝೂರ, ದ್ವಿತೀಯ ಶ್ರೇಣಿಯಲ್ಲಿ ಆಯಿಶಾ ಬಾನು ತೇರ್ಗಡೆ ಹೊಂದಿದ್ದಾರೆ.
5ನೇ ತರಗತಿಯ ಫಾತಿಮತು ತಝ್ಕಿಯ(452), 7ನೇ ತರಗತಿಯ ಫಾತಿಮತು ಸನ(442), 10ನೇ ತರಗತಿಯ ಆಯಿಶಾ ಶಹನಾಝ್(380), ಫಾತಿಮತು ಸಜ್ನಾ(372), 12ನೇ ತರಗತಿಯ ಫಾತಿಮ ಝೂರ ಮತ್ತು ಆಯಿಶಾ ಬಾನು ರೇಂಜ್ ಮಟ್ಟದಲ್ಲಿ ಅದಿಕ ಅಂಕ ಪಡೆದು ಸಾದನೆಗೈದವರಾಗಿದ್ದಾರೆ
ರೇಂಜ್ ಮಟ್ಟದಲ್ಲಿ ಶೇ 100 ಪಲಿತಾಂಶ ಬರಲು ಪ್ರಯತ್ನಿಸಿದ ಸದರ್ ಮುಅಲ್ಲಿಮ್ ಅಶ್ರಫ್ ಅಝ್ಹರಿ ಹಾಗೂ ಸಹ ಅದ್ಯಾಪಕರಿಗೆ ಮತ್ತು ಸಾದನೆಗೈದ ವಿಧ್ಯಾರ್ಥಿಗಳಿಗೆ ಮಸೀದಿ ಆಡಳಿತ ಸಮಿತಿ ಕೃತಜ್ಞತೆ ಸಲ್ಲಿಸಿದೆ ಎಂದು ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಹಮೀದ್ ಕಣ್ಣೂರು ತಿಳಿಸಿರುತ್ತಾರೆ







