ಸಿರಿಯ: ಸರಕಾರಿ ಪಡೆಗಳ ದಾಳಿಗೆ 12 ನಾಗರಿಕರು ಬಲಿ

ಡಮಾಸ್ಕಸ್ (ಸಿರಿಯ), ಮೇ 27: ವಾಯುವ್ಯ ಸಿರಿಯದಲ್ಲಿರುವ ಬಂಡುಕೋರರ ನೆಲೆಯೊಂದರ ಮೇಲೆ ಸರಕಾರಿ ಪಡೆಗಳು ರವಿವಾರ ನಡೆಸಿದ ವಾಯುದಾಳಿಯಲ್ಲಿ 12 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಇದ್ಲಿಬ್ ಪ್ರಾಂತದ ಮಾರೆಟ್ ಅಲ್-ನೂಮನ್ ಪಟ್ಟಣದ ಮಾರುಕಟ್ಟೆಯೊಂದರ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದು, ಮೃತರಲ್ಲಿ ಚಿಕ್ಕ ಹೆಣ್ಣುಮಗುವೊಂದು ಸೇರಿದೆ.
ಇದ್ಲಿಬ್‌ನ ಇತರೆಡೆಗಳಲ್ಲಿ ಸರಕಾರಿ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಇತರ 8 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದ ಬಫರ್ ರೆನ್ (ಸುರಕ್ಷಾ ವಲಯ) ಒಪ್ಪಂದದ ಪ್ರಕಾರ, ಸರಕಾರಿ ಪಡೆಗಳು ಇದ್ಲಿಬ್ ಮೇಲೆ ದಾಳಿ ನಡೆಸುವಂತಿಲ್ಲ. ಆದರೆ, ಎಪ್ರಿಲ್‌ನಿಂದ ಸರಕಾರಿ ಪಡೆಗಳು ಮತ್ತು ರಶ್ಯದ ಪಡೆಗಳು ವಾಯು ದಾಳಿಯನ್ನು ಹೆಚ್ಚಿಸಿವೆ.
Next Story





