ನಕ್ಸಲರಿಂದ ಐಇಡಿ ಸ್ಫೋಟ: 11 ಭದ್ರತಾ ಸಿಬ್ಬಂದಿಗೆ ಗಾಯ
ಹೊಸದಿಲ್ಲಿ, ಮೇ 28: ಜಾರ್ಖಂಡ್ನ ಸರೈಕೆಲ್ಲಾ ಪ್ರದೇಶದ ಕುಚೈನಲ್ಲಿ ಮಂಗಳವಾರ ಬೆಳಗ್ಗೆ ನಡೆದ ಐಇಡಿ ಸ್ಫೋಟದಿಂದ ಸಿಆರ್ಪಿಎಫ್ ಹಾಗೂ ರಾಜ್ಯ ಪೊಲೀಸ್ನ 11 ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ನಕ್ಸಲರು ಸ್ಪೋಟ ಕೃತ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ ಭದ್ರತಾ ಸಿಬ್ಬಂದಿಗಳನ್ನು ವಿಮಾನದ ಮೂಲಕ ರಾಂಚಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿ ಸಿಆರ್ಪಿಎಫ್ ಹಾಗೂ ಜಾರ್ಖಂಡ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿತ್ತು. ಐಇಡಿ ಬ್ಲಾಸ್ಟ್ ಆದ ಬಳಿಕ ನಕ್ಸಲರು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡು ಹಾರಾಟ ನಡೆಸಲು ಆರಂಭಿಸಿದ್ದರು ಎಂದು ತಿಳಿದುಬಂದಿದೆ.
Next Story