ಬ್ರೆಝಿಲ್: 4 ಜೈಲುಗಳಲ್ಲಿ ದೊಂಬಿ: ಕನಿಷ್ಠ 42 ಸಾವು
ರಿಯೋ ಡಿ ಜನೈರೋ (ಬ್ರೆಝಿಲ್), ಮೇ 28: ಉತ್ತರ ಬ್ರೆಝಿಲ್ನ ನಾಲ್ಕು ಜೈಲುಗಳಲ್ಲಿ ಸೋಮವಾರ ನಡೆದ ದೊಂಬಿಗಳಲ್ಲಿ ಕನಿಷ್ಠ 42 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪೈಕಿ ಒಂದು ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ 15 ಮಂದಿ ಮೃತಪಟ್ಟ ಒಂದು ದಿನದ ಬಳಿಕ ಇತರ ಜೈಲುಗಳಲ್ಲಿ ಈ ದೊಂಬಿ ಸಂಭವಿಸಿದೆ.
ಹಿಂಸಾಚಾರ ನಡೆದ ಎಲ್ಲ ಜೈಲುಗಳು ಅಮೆರೊನಸ್ ರಾಜ್ಯದಲ್ಲಿವೆ. ಈ ರಾಜ್ಯದ ರಾಜಧಾನಿ ಮನೌಸ್ ಸಮೀಪದಲ್ಲಿರುವ ಜೈಲಿನಲ್ಲಿ ನಡೆದ ಹಿಂಸೆಯಲ್ಲಿ ಕನಿಷ್ಠ 27 ಮಂದಿ ಹತರಾಗಿದ್ದಾರೆ.
ರಾಜ್ಯದ ಜೈಲುಗಳಲ್ಲಿನ ಭದ್ರತೆಯನ್ನು ಹೆಚ್ಚಿಸಲು ಹೆಚ್ಚುವರಿ ಪಡೆಗಳನ್ನು ಕಳುಹಿಸುವುದಾಗಿ ಬ್ರೆಝಿಲ್ನ ಕೇಂದ್ರ ಸರಕಾರ ಹೇಳಿದೆ.
Next Story