ಉ. ಕೊರಿಯ: ಲಂಚ ಕೊಟ್ಟು ಬದುಕುತ್ತಿರುವ ಜನರು
ವಿಶ್ವಸಂಸ್ಥೆ ವರದಿ
ಜಿನೇವ (ಸ್ವಿಟ್ಸರ್ಲ್ಯಾಂಡ್), ಮೇ 28: ಉತ್ತರ ಕೊರಿಯದಲ್ಲಿ ಬದುಕಬೇಕಾದರೆ ಜನಸಾಮಾನ್ಯರು ಅಧಿಕಾರಿಗಳಿಗೆ ಲಂಚ ಕೊಡಬೇಕು ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಮಂಗಳವಾರ ಬಿಡುಗಡೆ ಮಾಡಿದ ವರದಿಯೊಂದು ಹೇಳಿದೆ.
ನಾಯಕ ಕಿಮ್ ಜಾಂಗ್ ಉನ್ರ ಏಕಾಧಿಪತ್ಯದಲ್ಲಿ ಭ್ರಷ್ಟಾಚಾರ ಸಾಂಕ್ರಾಮಿಕವಾಗಿದೆ ಹಾಗೂ ದೌರ್ಜನ್ಯ ಎಲ್ಲೆಮೀರಿದೆ ಎಂದು ವರದಿ ತಿಳಿಸಿದೆ.
ಜೀವನ ನಿರ್ವಹಣೆಗಾಗಿ ಪರದಾಡುತ್ತಿರುವ ಜನರನ್ನು ಬಂಧಿಸುವ ಹಾಗೂ ಶಿಕ್ಷಿಸುವ ಬೆದರಿಕೆಯೊಡ್ಡಿ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದಿದೆ.
ಆದಾಗ್ಯೂ, ಉತ್ತರ ಕೊರಿಯವು ಈ ವರದಿಯನ್ನು ತಿರಸ್ಕರಿಸಿದೆ ಹಾಗೂ ಅದು ‘‘ದುಷ್ಟ ಉದ್ದೇಶಗಳಿಗಾಗಿ ರೂಪಿಸಲಾದ ರಾಜಕೀಯ ಪ್ರೇರಿತ ವರದಿಯಾಗಿದೆ’’ ಎಂದಿದೆ.
Next Story