‘ಪೆನ್ಸಿಲ್ ಬಾಕ್ಸ್’ ಚಿತ್ರದ ಪೋಸ್ಟರ್ ಬಿಡುಗಡೆ

ಮಂಗಳೂರು, ಮೇ 29: ‘ಪೆನ್ಸಿಲ್ ಬಾಕ್ಸ್’ ಚಿತ್ರದ ಪೋಸ್ಟರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ವೇಳೆ ನಿರ್ಮಾಪಕ ದಯಾನಂದ ರೈ, ನಿರ್ದೇಶಕ ರಝಾಕ್ ಪುತ್ತೂರು, ನಾಯಕಿ ದೀಕ್ಷಾ ಡಿ.ರೈ, ಗಾಯಕಿ ಕ್ಷೀತಿ ಕೆ.ರೈ, ನಟ ರಮೇಶ್ ಕುಕ್ಕುವಳ್ಳಿ, ಜಯಕೀರ್ತಿ, ಚುಮನ್ ಮಣಿಕಂಠ, ಅರುಣ್ ಕುಮಾರ್, ವಿಜಯ ಕುಮಾರ್ ಅಳದಂಗಡಿ, ಧನಂಜಯ ಆಚಾರ್ಯ, ಕಿರಣ್ ಶೆಟ್ಟಿ ಬೆಳ್ತಂಗಡಿ, ಪ್ರೇಮ್ ರಾಜ್, ಪ್ರದೀಪ್ ಪಾಣಾಜೆ ಮತ್ತಿತರರು ಉಪಸ್ಥಿತರಿದ್ದರು.
ಆಗಸ್ಟ್‌ನಲ್ಲಿ ಸಿನಿಮಾ ತೆರೆಗೆ
ದೃಶ್ಯ ಮೂವೀಸ್ ಬ್ಯಾನರ್‌ನಲ್ಲಿ ದಯಾನಂದ್ ಎಸ್. ರೈ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಪೆನ್ಸಿಲ್ ಬಾಕ್ಸ್’ ಕನ್ನಡ ಚಲನಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ.
ಸ್ಟಾರ್ ಸುವರ್ಣ ಡಾನ್ಸ್ ಡಾನ್ಸ್ ಹಾಗೂ ಭರ್ಜರಿ ಕಾಮಿಡಿ ರಿಯಾಲಿಟಿ ಶೋ ಮೂಲಕ ಕರ್ನಾಟಕದಲ್ಲಿ ಮನೆಮಾತಾದ ದೀಕ್ಷಾ ಡಿ ರೈ ಪ್ರಮುಖ ಪಾತ್ರದಲ್ಲಿ ಅಭಿನುವಿಸುತ್ತಿರುವ ಈ ಚಿತ್ರದಲ್ಲಿ ಕರಾವಳಿಯ ನಟರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಹಾಗೂ ರಮೇಶ್ ರೈ ಕುಕ್ಕುವಳ್ಳಿ ಮುಂತಾದವರ ಅಭಿನಯವಿದೆ. ಸಂಪೂರ್ಣವಾಗಿ ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ರಝಾಕ್ ಪುತ್ತೂರು ಕಥೆ, ಚಿತ್ರ ಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಮೋಹನ್ ಪಡ್ರೆ ಇವರ ಕ್ಯಾಮರಾ ಕೈ ಚಳಕವಿದೆ. ಜಯಕಾರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ. ಡಿಪಿನ್ ದಿವಾಕರ್ ಸಂಕಲನ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಎಸ್.ಪಿ ಸೆಲ್ವಂ, ಸುಜಿತ್ ಎಸ್. ಪಾಟಾಲಿ, ಅಕ್ಷತ್ ವಿಟ್ಲ ಕಾರ್ಯನಿರ್ವಹಿಸಿದ್ದಾರೆ. ಆಗಸ್ಟ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ‘ಪೆನ್ಸಿಲ್ ಬಾಕ್ಸ್’ ಚಿತ್ರವು ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ.







