Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಉಳ್ಳಾಲದಲ್ಲಿ ತಲೆ ಎತ್ತಲಿದೆ ಹೂದೋಟ...

ಉಳ್ಳಾಲದಲ್ಲಿ ತಲೆ ಎತ್ತಲಿದೆ ಹೂದೋಟ ಹೋಲುವ ಎಸ್ ಟಿಪಿ

ಒಳಚರಂಡಿ ವ್ಯವಸ್ಥೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ

ವಾರ್ತಾಭಾರತಿವಾರ್ತಾಭಾರತಿ29 May 2019 7:48 PM IST
share
ಉಳ್ಳಾಲದಲ್ಲಿ ತಲೆ ಎತ್ತಲಿದೆ ಹೂದೋಟ ಹೋಲುವ ಎಸ್ ಟಿಪಿ

ಮಂಗಳೂರು, ಮೇ 28: ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯದ್ದೇ ಅತೀ ದೊಡ್ಡ ಸಮಸ್ಯೆ. ಮನೆ, ಕಟ್ಟಡ, ಕೈಗಾರಿಕೆಗಳ ತ್ಯಾಜ್ಯ ನೀರು ಎಲ್ಲೆಂದೆರಲ್ಲಿ ಹರಿದು ಪರಿಸರವನ್ನು ಕಲುಷಿತಗೊಳಿಸುತ್ತದೆ. ಇದಕ್ಕಾಗಿ ಆಡಳಿತ ಯಂತ್ರವು ಸಾಕಷ್ಟು ಹೊಸ ಪ್ರಯೋಗಗಳ ಮೂಲಕ ಈ ಮಲಿನ ತ್ಯಾಜ್ಯ ನಿರ್ವಹಣೆಗೆ ಅತ್ಯುತ್ತಮ ಒಳಚರಂಡಿ ವ್ಯವಸ್ಥೆಗೆ ಹೊಸ ತಂತ್ರಜ್ಞಾನಗಳಿಗೆ ಮೊರೆ ಹೋಗುತ್ತವೆ. ಅಂತಹ ಪ್ರಯತ್ನವಾಗಿಯೇ ಇದೀಗ ಉಳ್ಳಾಲದಲ್ಲಿಯೂ ವಿನೂತನ ಮಾದರಿಯ ಒಳಚರಂಡಿ ವ್ಯವಸ್ಥೆಗೆ ಅಡಿಪಾಯ ಹಾಕಲಾಗಿದೆ. ಸ್ಮಾರ್ಟ್ ಸಿಟಿಯ ಹೊಸ್ತಿಲಲ್ಲಿರುವ ಮಂಗಳೂರು ನಗರಕ್ಕೆ ತಾಗಿಕೊಂಡಿರುವ ಉಳ್ಳಾಲ ನಗರಸಭಾ ವ್ಯಾಪ್ತಿಯೂ ಸದ್ಯವೇ ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನದ ಒಳಚರಂಡಿ ವ್ಯವಸ್ಥೆ ಕಾಮಗಾರಿ ಈ ಅತ್ಯಾಧುನಿಕ ವ್ಯವಸ್ಥೆಗೆ ಸಂಬಂಧಿಸಿ ಈಗಾಗಲೇ ಆರ್‌ಸಿಸಿ ಮ್ಯಾನ್‌ಹೋಲ್‌ಗಳು ಹಾಗೂ ಸೀವರ್ ಲೈನ್‌ಗಳು ಅಳವಡಿಸಲಾಗಿದ್ದು, ಶೀಘ್ರವೇ ಹೂದೋಟವನ್ನು ಹೋಲುವ ಮಲಿನ ನೀರು ಶುದ್ಧೀಕರಣ ಘಟಕಗಳು ತಲೆ ಎತ್ತಲು ಎಲ್ಲಾ ಸಿದ್ಧತೆ ನಡೆದಿದೆ. ಈ ಒಳಚರಂಡಿ ವ್ಯವಸ್ಥೆಯಡಿ ನಿರ್ಮಾಣವಾಗುವ ಮಲಿನ ನೀರು ಶುದ್ಧೀಕರಣ ಘಟಕಗಳು ಕೇವಲ ಹೂದೋಟವಾಗಿ ಹೋಲುವುದು ಮಾತ್ರವಲ್ಲ, ಹೂದೋಟವಾಗಿಯೂ ಸ್ಥಳೀಯರು ಬಳಸಬಹುದಾಗಿದೆ. ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ 2009ರಲ್ಲಿ ಇಲ್ಲಿ ಒಳಚರಂಡಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಸುಮಾರು 3 ವರ್ಷಗಳಿಂದ ಸುಮಾರು 60.50 ಕಿ.ಮೀ. ಉದ್ದದಲ್ಲಿ ಸೀವರ್ ಲೈನ್ ಅಳವಡಿಕೆ, 2,228 ಆರ್‌ಸಿಸಿ ಮ್ಯಾನ್‌ಹೋಲ್‌ಗಳ ನಿರ್ಮಾಣವಾಗಿದೆ. ಅಂದುಕೊಂಡಂತೆ ಎಲ್ಲವೂ ಸರಿಯಾಗಿದ್ದಲ್ಲಿ ಈಗಾಗಲೇ ಶುದ್ಧೀಕರಣ ಘಟಕಗಳು ಆರಂಭಗೊಂಡು ತ್ಯಾಜ್ಯ ನೀರು ಶುದ್ಧೀಕರಣ ಕಾರ್ಯ ನಡೆಯಬೇಕಾಗಿತ್ತು. ಆದರೆ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಸಂಬಂಧಿಸಿ ಆಯ್ಕೆಯಾದ ಜಾಗದ ಬಗ್ಗೆ ತಕರಾರು ಎದ್ದು, ಈ ಬಗ್ಗೆ ಖಾಸಗಿಯವರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ತೊಡಕಾಗಿತ್ತು. ಜಾಗದ ಸಮಸ್ಯೆಯಿಂದಾಗಿ ಶುದ್ಧೀಕರಣ ಘಟಕ ನಿರ್ಮಾಣ ವಿಳಂಬವಾಗಿದ್ದು, ಇದೀಗ ಕೋಡಿ ಕೋಟೆಪುರ ಹಾಗೂ ಕಲ್ಲಾಪು ಬುರ್ದು ಬಳಿ ಎರಡು ಪ್ರತ್ಯೇಕ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಆರಂಭಿಕವಾಗಿ 4.40 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕವು ಕೋಡಿ ಕೋಟೆಪುರ ಹಾಗೂ ಕಲ್ಲಾಪು ಬುರ್ದು ಬಳಿ 1.70 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ನಿರ್ಮಾಣವಾಗಲಿದೆ. 65.71 ಕೋಟಿ ರೂ.ಗಳ ಒಳಚರಂಡಿ ವ್ಯವಸ್ಥೆಯ ಈ ಯೋಜನೆಯಡಿ ಈಗಾಗಲೇ ಸುಮಾರು 29 ಕೋಟಿ ರೂ.ಗಳಲ್ಲಿ ಆರ್‌ಸಿಸಿ ಮ್ಯಾನ್‌ಹೋಲ್‌ಗಳು ಹಾಗೂ ಸೀವರ್‌ಲೈನ್ ಅಳವಡಿಸಲಾಗಿದೆ. ಉಳಿದಂತೆ ಯೋಜನೆಯಡಿ 8 ವೆಟ್‌ವೆಲ್‌ಗಲು ಹಾಗೂ 2 ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಲಿದೆ.

ಎಸ್‌ಬಿಟಿ ಟೆಕ್ನಾಲಜಿ ಆಧಾರಿತ ಘಟಕಗಳು: ಕೋಡಿ ಕೋಟೆಪುರ ಹಾಗೂ ಕಲ್ಲಾಪು ಬುರ್ದು ಬಳಿ ನಿರ್ಮಾಣವಾಗಲಿರುವ ಈ ಮಲಿನ ನೀರು ಶುದ್ಧೀಕರಣ ಘಟಕಗಳು ಎಸ್‌ಬಿಟಿ (ಸಾಯಿಲ್ ಬಯೋ ಟೆಕ್ನಾಲಜಿ- ಹೂದೋಟ ಮಾದರಿ) ತಂತ್ರಜ್ಞಾನದಿಂದ ಕೂಡಿರುತ್ತದೆ. ಈಗಾಗಲೇ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.

ಪರಿಸರ ಸ್ನೇಹಿ ಎಸ್‌ಬಿಟಿ ತಂತ್ರಜ್ಞಾನದ ವಿಶೇಷತೆ: ಈ ಘಟಕವು ನಿರ್ಮಾಣಗೊಂಡ ಬಳಿಕ ಇದು ಸಂಪೂರ್ಣವಾಗಿ ಸುಂದರ ಹೂದೋಟದಂತೆ ಕಾಣಲಿದೆ. ಸುಮಾರು 2.17 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣ ಆಗಲಿದ್ದು, ಈ ತಂತ್ರಜ್ಞಾನದ ಮೂಲಕ ಘಟಕ ನಿರ್ಮಾಣಕ್ಕೆ ಇತರ ತಂತ್ರಜ್ಞಾನಕ್ಕಿಂತ ಕಡಿಮೆ ಜಮೀನು ಸಾಕೆನ್ನುತ್ತಾರೆ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯ ಹಿರಿಯ ಅಧಿಕಾರಿಗಳು. ಮಾತ್ರವಲ್ಲದೆ ಈ ಮಲಿನ ನೀರು ಶುದ್ಧೀಕರಣ ಘಟಕವು ಹೊರಹಾಕುವ ನೀರು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಗುಣಮಟ್ಟ ಹಾಗೂ ಮಾನದಂಡದ ಪರಿಮಿತಿಯೊಳಗಿರಲಿದೆ. ಇದರ ನಿರ್ವಹಣೆ ಸುಲಭವಾಗಿದ್ದು, ವಿದ್ಯುತ್ ಖರ್ಚು ಕೂಡಾ ಕಡಿಮೆ. ಇದೊಂದು ಪರಿಸರ ಸ್ನೇಹಿ ತಂತ್ರಜ್ಞಾನವಾಗಿದೆ. ಮಾತ್ರವಲ್ಲದೆ ಈ ಘಟಕದಲ್ಲಿ ಯಾವುದೇ ರೀತಿಯ ಜೈವಿಕ ಕೆಸರು ಉತ್ಪಾದನೆ ಇರುವುದಿಲ್ಲ. ಈ ತಂತ್ರಜ್ಞಾನದಡಿ ಹೆಚ್ಚಿನ ಪ್ರಮಾಣದ ಕೆಸರು ಉತ್ಪಾದನೆ ಆಗುವುದಿಲ್ಲ. ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಗಿಡಮರಗಳಿಗೆ ಗೊಬ್ಬರವಾಗಿ ಬಳಕೆ ಕೂಡಾ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯ.

ಈ ಘಟಕದಲ್ಲಿ ಮಲಿನ ತ್ಯಾಜ್ಯದ ವಾಸನೆ ಬಾರದಂತೆ ನೈಸರ್ಗಿಕ ಸಂಯೋಜನೆಗಳನ್ನು ಬಳಸಲಾಗುತ್ತದೆ ಮತ್ತು ಜೈವಿಕ ಖನಿಜ ರಸಗೊಬ್ಬರವನ್ನು ಉತ್ಪಾದಿಸಬಹುದು. ಈ ತಂತ್ರಜ್ಞಾನವು ಮುಂಬೈನ ಐಐಟಿಯಿಂದ ಮಾನ್ಯತೆಯನ್ನು ಪಡೆದಿದೆ ಎಂದು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

ಏನಿದು ಎಸ್‌ಬಿಟಿ ತಂತ್ರಜ್ಞಾನ?

ಇದೊಂದು ಜೈವಿಕ ಪರಿವರ್ತನಾ ಪ್ರಕ್ರಿಯೆ. ಪ್ರಕೃತಿಯಲ್ಲಿ ನಡೆಯುವಂತೆ ವಾತಾವರಣಕ್ಕೆ ಹೊಂದಿಕೊಂಡು ಇಲ್ಲಿ ಶುದ್ಧೀಕರಣ ನಡೆಯುತ್ತದೆ. ಎಸ್‌ಬಿಟಿ ಎಂಬುದು ಆಮ್ಲಜನಕವನ್ನು ಒದಗಿಸುವ ಇಂಜಿನ್ ತರ ಕಾರ್ಯನಿರ್ವಹಿಸಿ ಗೃಹ ಮತ್ತು ಕೈಗಾರಿಕೆಗಳ ತ್ಯಾಜ್ಯ ನೀರನ್ನು ಶುದ್ಧಗೊಳಿಸುತ್ತದೆ. ಮಣ್ಣಿನ ಪರಿಸರ ವಿಜ್ಞಾನ ಹಾಗೂ ಜೈವಿಕ ಕ್ರಿಯೆಯನ್ನು ಬಳಸಿಕೊಂಡು ತ್ಯಾಜ್ಯ ನೀು ಶುದ್ಧೀಕರಣಗೊಳಿಸಲಾಗುತ್ತದೆ.

ಒಂದು ಪ್ರದೇಶ ಅಭಿವೃದ್ದಿಗೆ ಉತ್ತಮ ಒಳಚರಂಡಿ ವ್ಯವಸ್ಥೆ ಅತ್ಯಗತ್ಯ. ಮಂಗಳೂರು ನಗರಕ್ಕೆ ತಾಗಿಕೊಂಡಿರುವ ಉಳ್ಳಾಲದಲ್ಲಿಯೂ ಉತ್ತಮ ಒಳಚರಂಡಿ ಅತ್ಯಗತ್ಯವಾಗಿದೆ. ಇದಕ್ಕಾಗಿ ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು ಎಸ್‌ಟಿಪಿಗಳು ನಿರ್ಮಾಣವಾಗಲಿವೆ. ಇದಕ್ಕೆ ಬೇಕಾದ ಹೆಚ್ಚುವರಿ ಸುಮಾರು 30 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಇದೊಂದು ರಾಜ್ಯದಲ್ಲಿಯೇ ಮಾದರಿ ಒಳಚರಂಡಿ ವ್ಯವಸ್ಥೆಯಾಗಿ ರೂಪುಗೊಳ್ಳಲಿದೆ . 

ಯು.ಟಿ.ಖಾದರ್

ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

2021ರೊಳಗೆ ಸಾರ್ವಜನಿಕರ ಉಪಯೋಗಕ್ಕೆ

ಉಳ್ಳಾಲ ಒಳಚರಂಡಿ ಯೋಜನೆಯಡಿ ಅನುಷ್ಠಾನಗೊಳಿಸಲು ಬಾಕಿ ಇರುವ 8 ವೆಟ್‌ವೆಲ್‌ಗಳು, ಸೀವೇಜ್ ರೈಸಿಂಗ್ ಮೇನ್, ಸೀವೇಜ್ ಪಂಪ್‌ಸೆಟ್‌ಗಳು, 2 ಮಲಿನ ಶುದ್ಧೀಕರಣ ಘಟಕ ಹಾಗೂ ಇತರ ಕಾಮಗಾರಿಗಳನ್ನು ಐದು ವರ್ಷಗಳ ನಿರ್ವಹಣೆಯೊಂದಿಗೆ ಬೆಂಗಳೂರಿನ ಶುಭಾ ಸೇಲ್ಸ್ ಸಂಸ್ಥೆಗೆ ಗುತ್ತಿಗೆ ವಹಿಸಲಾಗಿದೆ. ಬಾಕಿ ಕಾಮಗಾರಿಗೆ ಎರಡು ವರ್ಷಗಳ ಕಾಲಾವಧಿಯನ್ನು ನೀಡಲಾಗಿದೆ. ಈಗಾಗಲೇ ತೊಕ್ಕೊಟ್ಟು ಬಳಿ ವೆಟ್‌ವೆಲ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. 2021ರೊಳಗೆ ಕಾಮಗಾರಿ ಪೂರ್ಣಗೊಂಡು ಸಂಪೂರ್ಣ ವ್ಯವಸ್ಥೆಯು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಈ ತಂತ್ರಜ್ಞಾನದ ಒಳಚರಂಡಿ ವ್ಯವಸ್ಥೆ ಅನುಷ್ಠಾನಗೊಂಡಿದ್ದು, ಮಡಿಕೇರಿಯಲ್ಲಿಯೂ ನಿರ್ಮಾಣವಾಗಿದೆ. ಇನ್ನಷ್ಟೇ ಕಾರ್ಯಾರಂಭಿಸಬೇಕಿದೆ. ಉಳಿದಂತೆ ದಕ್ಷಿಣಕನ್ನಡದ ಉಳ್ಳಾಲದಲ್ಲಿ ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. 

ಸಬಪ್ಪ ಯಲಿಬಳ್ಳಿ

ಕಾರ್ಯ ನಿರ್ವಾಹಕ ಇಂಜಿನಿಯರ್, ಕರ್ನಾಟಕ ನಗರ

ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X