ನ್ಯಾಷನಲ್ ಹೆರಾಲ್ಡ್ ಪ್ರಕಾಶಕ ಸಂಸ್ಥೆಗೆ ಸೇರಿದ ಪಂಚಕುಲಾದ ನಿವೇಶನ ಜಪ್ತಿ

ಹೊಸದಿಲ್ಲಿ,ಮೇ 29: ಹರ್ಯಾಣ ಸರಕಾರವು 2005ರಲ್ಲಿ ನ್ಯಾಷನಲ್ ಹೆರಾಲ್ಡ್‌ನ ಪ್ರಕಾಶಕ ಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಲಿ.(ಎಜೆಎಲ್)ಗೆ ಹಂಚಿಕೆ ಮಾಡಿದ್ದ ಪಂಚಕುಲಾದಲ್ಲಿಯ 64.93 ಕೋ.ರೂ.ವೌಲ್ಯದ ನಿವೇಶನವನ್ನು ಜಾರಿ ನಿರ್ದೇಶನಾಲಯ(ಈ.ಡಿ)ವು ಶೀಘ್ರವೇ ತನ್ನ ವಶಕ್ಕೆ ಪಡೆದುಕೊಳ್ಳಲಿದೆ.
ಈ.ಡಿ.ನಿವೇಶನವನ್ನು ಜಪ್ತಿ ಪಡಿಸಿಕೊಳ್ಳಲು ಕಳೆದ ವರ್ಷದ ಡಿ.1ರಂದು ಅಕ್ರಮ ಹಣ ವಹಿವಾಟು ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸಿತ್ತು. ಪಿಎಂಎಲ್‌ಎ ನಿರ್ಣಯ ಪ್ರಾಧಿಕಾರವು ಈ ಆದೇಶಕ್ಕೆ ಹಸಿರು ನಿಶಾನೆಯನ್ನು ತೋರಿಸಿರುವ ಹಿನ್ನೆಲೆಯಲ್ಲಿ ಈ.ಡಿ.ಈ ಕ್ರಮಕ್ಕೆ ಮುಂದಾಗಿದೆ.
ಡಿ.1ರಂದು ಸಿಬಿಐ ಕೂಡ ಎಜೆಎಲ್‌ಗೆ ನಿವೇಶನವನ್ನು ಹಂಚಿಕೆ ಮಾಡಲು ಅಕ್ರಮ ಮಾರ್ಗಗಳನ್ನು ಬಳಸಿದ್ದಕ್ಕಾಗಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ವಿರುದ್ಧ ಆರೋಪ ಪಟ್ಟಿಯನ್ನು ದಾಖಲಿಸಿತ್ತು.
ಗಾಂಧಿ ಕುಟುಂಬ ಸದಸ್ಯರು ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಎಜೆಎಲ್ ಅನ್ನು ನಿಯಂತ್ರಿಸುತ್ತಿದ್ದಾರೆ.
Next Story





