ಕಿಂಡಿ ಅಣೆಕಟ್ಟಿಗೆ 7 ಕೋಟಿ ರೂ.ಬಿಡುಗಡೆ: ಸರಕಾರಕ್ಕೆ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಕೃತಜ್ಞತೆ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ

ಬೆಂಗಳೂರು, ಮೇ 29: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವದ ಹಿನ್ನೆಲೆಯಲ್ಲಿ ತಕ್ಷಣವೇ ಸ್ಪಂದಿಸಿ ನೇತ್ರಾವತಿ ನದಿ ಮತ್ತು ನೆರಿಯ ನದಿಗೆ 2 ಕಿಂಡಿ ಅಣೆಕಟ್ಟು ನಿರ್ಮಿಸಲು 7ಕೋಟಿ ರೂ.ಮಂಜೂರು ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಕೃತಜ್ಞತೆ ಸಲ್ಲಿಸಲಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ವೀರೇಂದ್ರ ಹೆಗಡೆ, ಬೆಂಗಳೂರಿನ ಅನೇಕ ಜನರು ಧರ್ಮಸ್ಥಳಕ್ಕೆ ನೀರು ತಂದುಕೊಟ್ಟಿದ್ದು, ಅದನ್ನು ಅನ್ನಪೂರ್ಣ ಛತ್ರದಲ್ಲಿ ಅಡುಗೆ ಮತ್ತು ಭಕ್ತಾಧಿಗಳಿಗೆ ಕುಡಿಯಲು ಬಳಸಲಾಗಿದೆ. ನಿಮ್ಮೆಲ್ಲರ ಕಾಳಜಿಗೆ ಭಕ್ತಾದಿಗಳ ಪರವಾಗಿ ಧನ್ಯವಾದಗಳನ್ನು ಅರ್ಪಿಸಿತ್ತೇನೆ ಎಂದಿದ್ದಾರೆ.
ಶ್ರೀ ಮಂಜುನಾಥ ಸ್ವಾಮಿ ನಿಮಗೆ ದೀರ್ಘಾಯುರಾರೋಗ್ಯವನ್ನಿತ್ತು ಸಕಲ ಸನ್ನಂಗಲವನ್ನುಂಟು ಮಾಡಲಿ ಹಾಗೂ ನಿಮ್ಮ ದಕ್ಷ ನೇತೃತ್ವದಲ್ಲಿ ಸರಕಾರ ಯಶಸ್ವಿಯಾಗಿ ಆಡಳಿತ ನಡೆಸಲಿ ಎಂದು ವೀರೇಂದ್ರ ಹೆಗಡೆ ಪತ್ರದಲ್ಲಿ ಪ್ರಾರ್ಥಿಸಿದ್ದಾರೆ.
Next Story





