ಮೋದಿ ಪ್ರಮಾಣ ವಚನ ಸ್ವೀಕಾರ: ಸಮಾರಂಭಕ್ಕೆ ಪೇಜಾವರಶ್ರೀ
ಉಡುಪಿ, ಮೇ 29: ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ವಿಶೇಷ ಆಹ್ವಾನ ಬಂದಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಇಂದು ಮಂಗಳೂರಿನಿಂದ ವಿಮಾನದಲ್ಲಿ ಹೊಸದಿಲ್ಲಿಗೆ ತೆರಳಿದ್ದಾರೆ.
ಪೇಜಾವರಶ್ರೀಗಳು ನಾಳೆ ರಾತ್ರಿಯೇ ಉಡುಪಿಗೆ ಹಿಂದಿರುಗಲಿದ್ದಾರೆ ಎಂದು ಪೇಜಾವರ ಮಠದ ಮೂಲಗಳು ತಿಳಿಸಿವೆ.
Next Story





