ಎಸ್‍ವಿಎಸ್ ದೇವಳ ಕನ್ನಡ ಮಾಧ್ಯಮ ಶಾಲೆ: ಬಲೂನಿನ ಆಟದೊಂದಿಗೆ ಶಾಲಾ ಆರಂಭೋತ್ಸವ

ಬಂಟ್ವಾಳ, ಮೇ 29: ಎಸ್‍ವಿಸ್ ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳ ಆರಂಭೋತ್ಸವ ನಡೆಯಿತು. ಬೆಳಗ್ಗೆ ಮಕ್ಕಳ ಪ್ರಾರ್ಥನೆ ನಂತರ 1ರಿಂದ 5ನೇ ತರಗತಿ ವರೆಗಿನ ಪ್ರತೀ ಮಕ್ಕಳಿಗೆ ಬಲೂನುಗಳನ್ನು ನೀಡಿ ಅದರಲ್ಲಿ ಅವರ ಹೆಸರನ್ನು ಬರೆದು ಬಲೂನಿನ ಆಟದೊಂದಿಗೆ ವಿವಿಧ ಬಗೆಯ ಆಟಗಳನ್ನು ಆಡಿಸುವ ಮೂಲಕ ಆರಂಭ ಮಾಡಲಾಯಿತು.
ಸುಮಾರು ಒಂದು ಗಂಟೆಗಳ ಕಾಲ ಆಟವಾಡಿದ ಮಕ್ಕಳು ತಮ್ಮ ರಜಾದಿನಗಳ ಮಜಾವನ್ನು ಶಾಲಾ ತರಗತಿಯಲ್ಲಿ ಮರುಕಳಿಸದಂತೆ ಶಾಲಾ ದೈನಂದಿನ ಪಾಠಗಳ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು. ಬಂಟ್ವಾಳ ಶಿಕ್ಷಣ ಇಲಾಖೆಯ ಸಿಆರ್‍ಪಿ ರೇಶ್ಮಾ ಮತ್ತು ಬಿಐಈಆರ್‍ಟಿ ಶೋಭಾ ಈ ಸಂದರ್ಭ ಉಪಸ್ಥಿತರಿದ್ದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಚಂದ್ರಮ್ಮ, ಶಿಕ್ಷಕಿಯರಾದ ಮಾಲತಿ, ಜಯಶ್ರೀ, ಪೂರ್ಣಿಮಾ ಮಕ್ಕಳ ಆಟೋಟದಲ್ಲಿ
ಸಹಕರಿಸಿದ್ದರು.
Next Story





