ಮಂಗಳೂರು ಏರ್‌ಪೋರ್ಟ್‌ನಲ್ಲಿ 10 ಲಕ್ಷ ರೂ. ಮೌಲ್ಯದ ಚಿನ್ನ ವಶ

ಮಂಗಳೂರು, ಮೇ 29: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದ ಓರ್ವ ಪ್ರಯಾಣಿಕನಿಂದ 10.84 ಲಕ್ಷ ರೂ. ಮೌಲ್ಯದ 333.84 ಗ್ರಾಂ ತೂಕದ ವಿದೇಶಿ ಮೂಲದ ಚಿನ್ನವನ್ನು ಪತ್ತೆ ಹಚ್ಚಿ ವಶ ಪಡಿಸಿಕೊಂಡಿದ್ದಾರೆ.
ಚಿನ್ನವನ್ನು ಪೇಸ್ಟ್ ರೂಪದಲ್ಲಿ ಪ್ರಯಾಣಿಕ ಧರಿಸಿದ ಶೂಗಳ ಸಾಕ್ಸ್‌ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸಿದ್ದನು. ಮೇ 28ರಂದು ದುಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಪ್ರಯಾಣಿಕ ಬಂದಿದ್ದು, ಸಂಶಯದಿಂದ ತಪಾಸಣೆಗೆ ಒಳ ಪಡಿಸಿದಾಗ ಆತ ಧರಿಸಿದ್ದ ಸಾಕ್ಸ್‌ನಲ್ಲಿ ಚಿನ್ನ ಪತ್ತೆಯಾಯಿತು.
Next Story





