ಮುದರಂಗಡಿ ಗ್ರಾಪಂ: ಶೇ.66.38 ಮತದಾನ
ಉಡುಪಿ, ಮೇ 29: ಕಾಪು ತಾಲೂಕು ಮುದರಂಗಡಿ ಗ್ರಾಪಂ ವ್ಯಾಪ್ತಿಯ ಪಿಲಾರು-1 ಕ್ಷೇತ್ರದ ಒಂದು ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆ ಯಲ್ಲಿ ಶೇ.66.38ರಷ್ಟು ಮತದಾನವಾಗಿದೆ. ಕ್ಷೇತ್ರದ ಒಟ್ಟು 925 ಮಂದಿ ಮತದಾರ ರಲ್ಲಿ 614 ಮಂದಿ ಇಂದು ಮತದಾನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ನಾಲ್ಕು ಗ್ರಾಪಂಗಳಲ್ಲಿ ತೆರವಾಗಿರುವ ನಾಲ್ಕು ಸ್ಥಾನಗಳಿಗೆ ಚುನಾವಣೆಯನ್ನು ಘೋಷಿಸಲಾಗಿದ್ದು, ಇದರಲ್ಲಿ ಕುಂದಾಪುರ ತಾಲೂಕು ಹಾಲಾಡಿ ಗ್ರಾಪಂನ ಹಾಲಾಡಿ-1, ತಲ್ಲೂರು ಗ್ರಾಪಂನ ಉಪ್ಪಿನಕುದ್ರು-1 ಹಾಗೂ ಕೋಟ ಗ್ರಾಪಂನ ಗಿಳಿಯಾರು-1 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಹೀಗಾಗಿ ಮುದರಂಗಡಿ ಗ್ರಾಪಂನಲ್ಲಿ ತೆರವಾಗಿರುವ ಪಿಲಾರು-1 ಕ್ಷೇತ್ರಕ್ಕೆ ಮಾತ್ರ ಇಂದು ಮತದಾನ ನಡೆಯಿತು.
Next Story





