ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಯೆಮನ್ ಪ್ರಜೆಗೆ ಹೊಸ ಬದುಕು ಕಲ್ಪಿಸಿದ ಬೆಂಗಳೂರಿನ ವೈದ್ಯರು

ಬೆಂಗಳೂರು, ಮೇ 29: ಹೃದಯದ ಸಂಕೀರ್ಣ ಸಮಸ್ಯೆಯಿಂದ ಹೃದಯಾಘಾತಕ್ಕೆ ಒಳಗಾಗಿ ಬದುಕುವ ಭರವಸೆಯನ್ನೇ ಕಳೆದುಕೊಂಡಿದ್ದ ಯೆಮನ್ ದೇಶದ ಪ್ರಜೆ ಮುಹಮ್ಮದ್ ಅಬ್ದುಲಾ ಅವರಿಗೆ ನಗರದ ಸಕ್ರ ವಲ್ಡ್ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊಸ ಬದುಕು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯ ಡಾ. ಆದಿಲ್ ಸಿದ್ಧಿಕ್, ಬಹಳ ಸಂಕೀರ್ಣ ಸ್ವರೂಪದ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಯೆಮನ್ ಪ್ರಜೆ ವಿವಿಧ ಚಿಕಿತ್ಸೆಗಳ ಮೂಲಕ ಸಾಮಾನ್ಯ ಸ್ಥಿತಿಗೆ ಬರುವಂತೆ ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಚಿಕಿತ್ಸೆಯಿಂದ ಗುಣಮುಖರಾಗುತ್ತಿರುವ ಮುಹಮ್ಮದ್ ಅಬ್ದುಲಾ ಮಾತನಾಡಿ, ಹೃದ್ರೋಗ ಸಮಸ್ಯೆಯಿಂದ ದಿನನಿತ್ಯದ ಕೆಲಸವು ಸವಾಲಿನದ್ದು ಹಾಗೂ ಕಷ್ಟಕರವಾಗಿದ್ದಾಗಿತ್ತು. ಇಂದು ನಾನು ಗುಣಮುಖನಾಗುತ್ತಿದ್ದು, ಯೆಮನ್‌ಗೆ ತೆರಳಿದ ಮೇಲೆ ನಾನು ಮೊದಲಿನಂತೆ ಕೆಲಸಕ್ಕೆ ತೆರಳಬಹುದಾಗಿದೆ’ ಎಂದು ನುಡಿದರು.
Next Story





