ಸ್ಪೀಡ್ ಸ್ಕೇಟಿಂಗ್ ಓಪನ್ ಚಾಲೆಂಜ್ 2019: ಅಣ್ಣ- ತಂಗಿಗೆ ಚಿನ್ನ, ಬೆಳ್ಳಿ ಪದಕಗಳು

ಮಂಗಳೂರು, ಮೇ 30: ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ದೆಹಲಿಯ ಗುರುಗ್ರಾಮದಲ್ಲಿ ನಡೆದ ಸ್ಪೀಡ್ ಸ್ಕೇಟಿಂಗ್ ಓಪನ್ ಚಾಲೆಂಜ್ 2019 ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಮಂಗಳೂರಿನ ಅಣ್ಣ- ತಂಗಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಮಂಗಳೂರಿನ ಮಾಲೆಮಾರ್ ನಿವಾಸಿಯಾದ ಫ್ರಾನ್ಸಿಸ್ ಕೊನ್ಸೆಸ್ಸೊ ಹಾಗೂ ಡೋರಿಸ್ ಕೊನ್ಸೆಸ್ಸೊ ದಂಪತಿಯ ಪುತ್ರಿ ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ 13 ರಿಂದ 15 ವರ್ಷದೊಳಗಿನ ಬಾಲಕಿಯರ ವಿಭಾಗದ 500 ಮೀಟರ್ ಐಸ್ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
15 ರಿಂದ 19 ವರ್ಷದೊಳಗಿನ ಬಾಲಕರ 500 ಮೀಟರ್ ಐಸ್ ರಿಂಕ್ ರೇಸ್‌ನಲ್ಲಿ ಡ್ಯಾನಿಯಲ್ ಸಲ್ವಡೊರ್ ಕೊನ್ಸೆಸ್ಸೊ ಬೆಳ್ಳಿ ಪದಕ ಪಡೆದಿದ್ದಾರೆ. ಇವರಿಬ್ಬರೂ ಮಂಗಳೂರಿನ ನೀರುಮಾರ್ಗದ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿಗಳು.
ಐಸ್ ಸ್ಕೇಟಿಂಗ್ ರಾಷ್ಟ್ರೀಯ ತರಬೇತುದಾರ ಅವಧೂತ್ ಥಾವಡೆ ಅವರಿಂದ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದು, ಮಂಗಳೂರಿನ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯರಾಗಿರುವ ಇವರು ತರಬೇತುದಾರರಾದ ಮೋಹನ್ ದಾಸ್ ಕೆ. ಹಾಗೂ ಜಯರಾಜ್ ಅವರಿಂದ ಸ್ಕೇಟಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ.







