ರಾಜ್ಯ ಮಟ್ಟದ ಬ್ಯಾಡ್ಮಿಂಟನ್: ಪ್ರಶಾಂತ್-ಸಹಸ್ರ ಚಾಂಪಿಯನ್

ಉಡುಪಿ, ಮೇ 30: ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ಕ್ಲಬ್ ಉಡುಪಿ ಮಣಿಪಾಲ ಹಾಗೂ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಶ್ರಯದಲ್ಲಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾದ 18ನೆ ರಾಜ್ಯ ಮಟ್ಟದ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ಸ್‌ನಲ್ಲಿ ಪ್ರಶಾಂತ್ ಸೋಮಯಾಜಿ ಹಾಗೂ ಸಹಸ್ರ ಶಿವಮೊಗ್ಗ ಪ್ರಶಸ್ತಿ ಗೆದ್ದುಕೊಂಡಿ ದ್ದಾರೆ.
40 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಮಹೇಶ್ ಪ್ರಭು ಮತ್ತು ಪರಿಮಳ್ ಮಂಗಳೂರು ಹಾಗೂ 50ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಡಾ.ಕಿಶೋರ್ ಮತ್ತು ಅಶೋಕ್ ಕುಮಾರ್ ಮಂಗಳೂರು ಪ್ರಥಮ ಬಹು ಮಾನವನ್ನು ಪಡೆದರು. ವಿವಿಧ ವಿಭಾಗಗಳ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಅಶೋಕ್ ಪಣಿಯಾಡಿ ಮೊದಲಾದವರು ಉಪಸ್ಥಿತರಿದ್ದರು.
Next Story





