ಗಾಯಾಳು ಚಿಕಿತ್ಸೆಗಾಗಿ ಧನ ಸಹಾಯ ಹಸ್ತಾಂತರ

ಕುಂದಾಪುರ, ಮೇ 30: ಇತ್ತೀಚೆಗೆ ಎಡಕಾಲಿನ ಪಾದದ ಮೇಲೆ ಬಸ್ಸಿನ ಚಕ್ರ ಚಲಿಸಿ ಜರ್ಜರಿತರಾಗಿದ್ದ ಗಾಯಾಳು ಅನ್ವರ್ ಬಾಷಾ ಎಂಬವರ ಚಿಕಿತ್ಸೆ ಗಾಗಿ ದಾನಿಗಳಿಂದ ಸಗ್ರಹಿಸಿದ ಹಣವನ್ನು ಹಸ್ತಾಂತರಿಸಲಾಯಿತು.
ಕುಂದಾಪುರ ಪುರಸಭಾ ಸದಸ್ಯ ಅಬ್ಬು ಮುಹಮ್ಮದ್ ಹಾಗೂ ಹೊಸ ಬಸ್ ನಿಲ್ದಾಣದ ಪ್ರಮುಖ ಪಾರ್ಸೆಲ್ ವಿತರಕ ಸಿರಾಜ್ ಗಾಯಾಳು ಬಾಷಾ ಅವರ ಹೆಮ್ಮಾಡಿ ಸಂತೋಷ ನಗರದಲ್ಲಿರುವ ಮನೆಗೆ ಭೇಟಿ ನೀಡಿ ದಾನಿಗಳಿಂದ ಸಂಗ್ರಹಿಸಿದ 50,000 ರೂ.ವನ್ನು ಹಸ್ತಾಂತರಿಸಿದರು.
ಕಳೆದ ಸುಮಾರು 15 ವರ್ಷಗಳಿಂದ ಕುಂದಾಪುರ ಬಸ್ ನಿಲ್ದಾಣದಲ್ಲಿ ಪಾರ್ಸೆಲ್ ವಿತರಣೆ ಮಾಡುವ ಉದ್ಯೋಗದಲ್ಲಿ ಗುರುತಿಸಿಕೊಂಡಿರುವ ಇವರು ಬಸ್‌ನಿಂದ ಪಾರ್ಸೆಲ್ ಪಡೆದು ಇಳಿಯುವಾಗ ಅವರ ಎಡಪಾದ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ ಛಿದ್ರವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ದಾಖ ಲಾಗಿದ್ದ ಅವರ ಚಿಕಿತ್ಸಾ ವೆಚ್ಚಕ್ಕಾಗಿ ದಾನಿಗಳು ತಮ್ಮ ಕೈಲಾದ ಧನ ಸಹಾಯವನ್ನು ನೀಡಿದ್ದರು.
Next Story





