ಅನುಮತಿ ಇಲ್ಲದೆ ಪಿಎಫ್‌ಐ ಪಥಸಂಚಲನ: ದೋಷಮುಕ್ತ
ಉಡುಪಿ, ಮೇ 30: ಪಾಪ್ಯುಲರ್ ಫ್ರಂಟ್ ಸಂಸ್ಥಾಪನ ದಿನದ ಅಂಗವಾಗಿ 2014ರ ಫೆ.17ರಂದು ಉಡುಪಿಯಲ್ಲಿ ಅನುಮತಿ ಪಡೆಯದೆ ಆಯೋಜಿಸಿದ್ದ ಯುನಿಟಿ ಮಾರ್ಚ್(ಕಾರ್ಯಕರ್ತರ ಪಥಸಂಚಲನ) ಪ್ರಕರಣದ ಎಲ್ಲ ಆರೋಪಿಗಳನ್ನು ಉಡುಪಿಯ ಒಂದನೇ ಹೆಚ್ಚುವರಿ ಪ್ರಥಮ ದರ್ಜೆಯ ನ್ಯಾಯ ದಂಡಾಧಿಕಾರಿ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ನೀಡಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಪೊಲೀಸರ ಆರೋಪ ದಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯ ಪಟ್ಟು, ಪ್ರಕರಣದ ಆರೋಪಿ ಗಳಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಉಡುಪಿ ಜಿಲ್ಲಾ ನಾಯಕರನ್ನು ಖುಲಾಸೆಗೊಳಿಸಿದೆ. ಆರೋಪಿಗಳ ಪರವಾಗಿ ವಕೀಲ ರಾದ ಆಸೀಫ್ ಬೈಕಾಡಿ ಮತ್ತು ಅಬೂಬಕ್ಕರ್ ಸಿದ್ದಿಕ್ ವಾದಿಸಿದ್ದರು.
Next Story





