ಶ್ರೀ ಮಹಾವೀರ ಕಾಲೇಜಿನಲ್ಲಿ 600 ಕೆಡೆಟ್‍ಗಳಿಂದ ಎನ್‍ಸಿಸಿ ಶಿಬಿರ : ಕರ್ನಲ್ ಮನೋಜ್ ವಿ.ಯು
ಮೂಡುಬಿದಿರೆ : ಇಲ್ಲಿನ ಶ್ರೀ ಮಹಾವೀರ ಕಾಲೇಜಿನಲ್ಲಿ 18ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಇದರ ವಾರ್ಷಿಕ ತರಬೇತಿ ಶಿಬಿರವು ನಡೆಯುತ್ತಿದ್ದು ಈ ಶಿಬಿರದಲ್ಲಿ ಆರ್ಮಿ ವಿಭಾಗಕ್ಕೆ ಒಳಪಟ್ಟ ದ.ಕ ಜಿಲ್ಲೆಯ 28 ಶಾಲಾ ಕಾಲೇಜುಗಳ 600 ವಿದ್ಯಾರ್ಥಿಗಳು ಕೆಡೆಟ್‍ಗಳಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆಂದು 18ನೇ ಬೆಟಾಲಿಯನ್‍ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಮನೋಜ್ ವಿ.ಯು ತಿಳಿಸಿದರು.
ಅವರು ಮಹಾವೀರ ಕಾಲೇಜಿನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೇ 26ರಂದು ತರಬೇತಿಯ ಉದ್ಘಾಟನೆ ನಡೆದಿದ್ದು 10 ದಿನಗಳ ಈ ಶಿಬಿರದಲ್ಲಿ ಎನ್‍ಸಿಸಿಯ ಎ,ಬಿ ಮತ್ತು ಸಿ ಸರ್ಟಿಫಿಕೇಟ್ ಪರೀಕ್ಷೆಗಳಿಗೆ ಮಾತ್ರವಲ್ಲದೆ ರಾಷ್ಠ್ರಮಟ್ಟದ ತಲಾ ಸೈನಿಕ ಶಿಬಿರ ಮತ್ತು ಗಣರಾಜ್ಯೋತ್ಸವ ಪರೇಡ್‍ಗಳಿಗೆ ವಿದ್ಯಾರ್ಥಿಗಳನ್ನು ಈ ತರಬೇತಿಯಲ್ಲಿ ಆಯ್ಕೆ ಮಾಡಲಾಗುವುದೆಂದು ಎಂದವರು ಮಾಹಿತಿ ನೀಡಿದರು.
ಡೆಪ್ಯೂಟಿ ಕ್ಯಾಂಪ್ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಗ್ರೇಸಿಯನ್ ಸಿಕ್ವೇರಾ ಮಾತನಾಡಿ ಈ ಶಿಬಿರದಲ್ಲಿ ಕೆಡೆಟ್‍ಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗಾಗಿ ವ್ಯಾಯಾಮ, ಸೈನಿಕ ಕವಾಯತು, ಶೂಟಿಂಗ್ ತರಬೇತಿ, ಆಯುಧ ತರಬೇತಿ, ಮ್ಯಾಪ್ ರೀಡಿಂಗ್, ಬ್ಯಾಟಲ್ ಕ್ರಾಪ್ಟ್, ಫೀಲ್ಡ್ ಕ್ರಾಫ್ಟ್ ಮತ್ತಿತರ ಪೂರಕ ತರಬೇತಿಗಳನ್ನು ಮಾತ್ರವಲ್ಲದೆ ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಈ ಶಿಬಿರದಲ್ಲಿ ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶಗಳ ಬಗ್ಗೆ ಅರಿವು ನೀಡಲಾಗುತ್ತಿದ್ದು ಸೈನಿಕ ಚಟುವಟಿಕೆಗಳ ಪ್ರದರ್ಶನ ಹಲವು ಪ್ರಾತ್ಯಕ್ಷಿಕೆ, ಸ್ವಚ್ಛತಾ ಪಕೋಡ್ ಮತ್ತಿತರ ಜಾಗೃತಿ ಕಾರ್ಯಕ್ರಮಗಳನ್ನು ಈ ತರಬೇತಿ ಶಿಬಿರದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಶಿಬಿರದಲ್ಲಿ 18ನೇ ಕರ್ನಾಟಕ ಬೆಟಾಲಿಯನ್‍ನ ಹಿರಿಯ ಅಧಿಕಾರಿಗಳು, ಬೇರೆ ಬೇರೆ ವಿದ್ಯಾ ಸಂಸ್ಥೆಗಳ ಎಸ್‍ಸಿಸಿ ಅಧಿಕಾರಿಗಳು ಸೇರಿದಂತೆ ಒಟ್ಟು 25 ತರಬೇತುದಾರರು ಆಧುನಿಕ ಸಶಸ್ತ್ರಗಳನ್ನು ತಂದು ಪ್ರಾತ್ಯಕ್ಷಕೆ ಮೂಲಕ ಕೆಡೆಟ್‍ಗಳಿಗೆ ಪ್ರಯೋಗಾತ್ಮಕವಾಗಿ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಶ್ರೀ ಮಹಾವೀರ ಕಾಲೇಜಿನ ಎನ್‍ಸಿಸಿ ಅಧಿಕಾರಿ ರಾಧಾಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







