ಸಮತೋಲಿತ ಶಿಕ್ಷಣ ಇಂದಿನ ಅಗತ್ಯ: ಬಿಷಪ್ ಡಾ.ಲೋಬೊ

ಕಲ್ಯಾಣಪುರ, ಮೇ 30: ದೇಹದ ಆರೋಗ್ಯಕ್ಕೆ ಹೇಗೆ ಸಮತೋಲಿತ ಆಹಾರದ ಅಗತ್ಯವಿದೆಯೇ ಹಾಗೆಯೇ ಇಂದಿನ ವಿದ್ಯಾರ್ಥಿಗಳಿಗೆ ಪಾಠ ಪಠ್ಯೇತರ ಜ್ಞಾನದ ಜೊತೆಗೆ ಮೌಲ್ಯಗಳುಳ್ಳ ನೈತಿಕ ಶಿಕ್ಷಣದ ಅಗತ್ಯವಿದೆ. ತರಗತಿ ಕೋಣೆಗಳಲ್ಲಿ ನಾಳಿನ ಉಜ್ವಲ ಭಾರತದ ಪ್ರಜ್ಞಾವಂತ ನಾಗರಿಕರು ರೂಪು ಗೊಳ್ಳಬೇಕಾಗಿದೆ ಎಂದು ಉಡುಪಿ ಧರ್ಮಪ್ರಾಂತದ ಬಿಷಪ್ ಅ.ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಸುಸಜ್ಜಿತ ನಾಲ್ಕು ಮಹಡಿಗಳ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಪಂ ಸದಸ್ಯ ಜನಾರ್ಧನ ತೋನ್ಸೆ ಮಾತನಾಡಿ, 1997ರಲ್ಲಿಕಲ್ಯಾಣಪುರ ಗ್ರಾಪಂ ಅಧ್ಯಕ್ಷನಾಗಿ ಶಾಲೆ ಆರಂಭಿಸಲು ಅನುಮತಿ ಪತ್ರವನ್ನು ನೀಡುವಾಗ ಕೇವಲ 16 ವಿದ್ಯಾರ್ಥಿಗಳಿದ್ದು, ಪ್ರಸ್ತುತ 1500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ ಎಂದರೆ ಆಡಳಿತ ಮಂಡಳಿ ಹಾಗು ಶಿಕ್ಷಕರ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಪಂ ಸದಸ್ಯ ಜನಾರ್ನತೋನ್ಸೆಮಾತನಾಡಿ,1997ರಲ್ಲಿಕಲ್ಯಾಣಪುರಗ್ರಾಪಂಅ್ಯಕ್ಷನಾಗಿ ಶಾಲೆ ಆರಂಭಿಸಲು ಅನುಮತಿ ಪತ್ರವನ್ನು ನೀಡುವಾಗ ಕೇವಲ 16 ವಿದ್ಯಾರ್ಥಿಗಳಿದ್ದು, ಪ್ರಸ್ತುತ 1500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ ಎಂದರೆ ಆಡಳಿತ ಮಂಡಳಿ ಹಾಗು ಶಿಕ್ಷಕರ ಬದ್ಧತೆಯನ್ನು ತೋರಿಸುತ್ತದೆ ಎಂದರು. ಶಾಲೆಯು ಸುಸಜ್ಜಿತ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯ, ಶಿಕ್ಷಕರ ಕೊಠಡಿ, ಕಂಪ್ಯೂಟರ್ ಲ್ಯಾಬ್, ಶೌಚಾಲಯಗಳು, ಪ್ರತಿ ಮಹಡಿಯಲ್ಲಿ ಸಂಸ್ಕರಿಸಿದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಭಾಂಗಣ ವನ್ನು ಹೊಂದಿದೆ.
ದಾನಿಗಳ ಸಹಾಯದಿಂದ ಕ್ಲಪ್ತ ಸಮಯದಲ್ಲಿ ಶಾಲೆಗೆ ನೂತನ ಕಟ್ಟಡ ಒದಗಿಸಿದ ಶಾಲಾ ಸಂಚಾಲಕ ವಂ. ಡಾ. ಲೆಸ್ಲಿ ಡಿಸೋಜರನ್ನು ಡಾ.ಲೋಬೊ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಜೆರಿ ವಿನ್ಸೆಂಟ್ ಡಾಯಸ್, ಸಹಾಯಕ ಧರ್ಮಗುರು ಕ್ಲ್ಯಾನಿ ಡಿಸೋಜ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ಡಾಯಸ್, ಕಾರ್ಯದರ್ಶಿ ರೊನಾಲ್ಡ್ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ. ರವಿಶಂಕರ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ವಂ. ಡಾ. ಲೆಸ್ಲಿ ಡಿಸೋಜ ಸ್ವಾಗತಿಸಿದರು. ಶಿಕ್ಷಕಿಯರಾದ ವನಿತ, ಲವೀನಾ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವಂದಿತಾ ವಂದಿಸಿದರು.







