ಚೆಸ್ ಪಂದ್ಯಾವಳಿ: ತನವ್, ತನಿಷ್ಕಾ ಜೈನ್ಗೆ ಬಹುಮಾನ
ಮಂಡ್ಯ, ಮೇ 30: ಕೇರಳದ ಎರ್ನಾಕುಲಂನ ರಾಜೀವ್ಗಾಂಧಿ ಒಳ ಕ್ರೀಡಾಂಗಣದಲ್ಲಿ ಮೇ 26ರಿಂದ 28ರವರೆಗೆ 4 ಕ್ವೀನ್ಸ್ ಚೆಸ್ ಕ್ಲಬ್ ಆಯೋಜಿಸಿದ್ದ ಎರಡನೆಯ ಅಖಿಲ ಭಾರತ ರೇಟಿಂಗ್ 1400 ಒಳಗಿನ ಪಂದ್ಯಾವಳಿಯಲ್ಲಿ ಮಂಡ್ಯ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ತನವ್ ಎಸ್ ಹಾಗೂ ತನಿಷ್ಕಾ ಜೈನ್ ಜಯಗಳಿಸಿದ್ದಾರೆ.
ಹನ್ನೆರಡು ವಯಸ್ಸಿನ ತನವ್ ಎಸ್ ಒಂಬತ್ತು ಸುತ್ತಿನಲ್ಲಿ ಏಳು ಪಾಯಿಂಟ್ ಗಳಿಸಿ ಮುಖ್ಯ ವಿಭಾಗದಲ್ಲಿ ಹತ್ತೊಂಬತ್ತನೆಯ ಸ್ಥಾನದೊಂದಿಗೆ ಏಳು ಸಾವಿರ ನಗದು ಬಹುಮಾನ ಮತ್ತು 33 ರೇಟಿಂಗ್ ಪಾಯಿಂಟ್ ಹೆಚ್ಚಿಸಿಕೊಂಡಿದ್ದಾನೆ. ಎಂಟು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ತನಿಷ್ಕಾ ಜೈನ್ 9 ಸುತ್ತಿನಲ್ಲಿ ಒಂಬತ್ತು ರೇಟಿಂಗ್ ಆಟಗಾರರೊಂದಿಗೆ ಆಡಿ ಮೂರು ಪಾಯಿಂಟ್ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಪಂದ್ಯಾವಳಿಯಲ್ಲಿ ದೇಶಾದ್ಯಂತ ಸುಮಾರು 556 ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ 424 ಅಂತಾರಾಷ್ಟ್ರೀಯ ರೇಟಿಂಗ್ ಆಟಗಾರರಿದ್ದರು ಎಂದು ಮಂಡ್ಯ ಚೆಸ್ ಅಕಾಡೆಮಿ ಕಾರ್ಯದರ್ಶಿ ಮಂಜುನಾಥ್ ಜೈನ್ ತಿಳಿಸಿದ್ದಾರೆ.
Next Story