ವಿಶ್ವಕಪ್: ವಿಂಡೀಸ್‌ಗೆ ಸುಲಭ ತುತ್ತಾದ ಪಾಕ್

ಟ್ರೆಂಟ್‌ಬ್ರಿಡ್ಜ್, ಮೇ 31: ಆರಂಭಿಕ ಆಟಗಾರ ಕ್ರಿಸ್ ಗೇಲ್ ಸಿಡಿಸಿದ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ ಶುಕ್ರವಾರ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ಒಶಾನೆ ಥಾಮಸ್(4-27) ನೇತೃತ್ವದ ವಿಂಡೀಸ್ ಬೌಲಿಂಗ್ ದಾಳಿಗೆ ಕಂಗಾಲಾಗಿ 21.1 ಓವರ್‌ಗಳಲ್ಲಿ ಕೇವಲ 105 ರನ್‌ಗೆ ಆಲೌಟಾಯಿತು.
ಗೆಲ್ಲಲು ಸುಲಭ ಗುರಿ ಪಡೆದ ವಿಂಡೀಸ್ 13.4 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 108 ರನ್ ಗಳಿಸಿತು. ಗೇಲ್(50, 34 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಪೂರನ್(ಔಟಾಗದೆ 34, 19 ಎಸೆತ, 4 ಬೌಂಡರಿ, 2 ಸಿಕ್ಸರ್)ವಿಂಡೀಸ್‌ಗೆ ಇನ್ನೂ 218 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು. ಪಾಕ್‌ನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಥಾಮಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Next Story





