ವಿಶ್ವಕಪ್: ಅತ್ತಾವರ ಬಿಗ್ ಬಝಾರ್‌ನಲ್ಲಿ ಅತ್ಯಾಕರ್ಷಕ ಕೊಡುಗೆ

ಮಂಗಳೂರು, ಮೇ 31: ವಿಶ್ವಕಪ್ ಕ್ರಿಕೆಟ್ ಪ್ರಯುಕ್ತ ಮಂಗಳೂರು ನಗರದ ಅತ್ತಾವರ ಬಿಗ್ ಬಝಾರ್‌ನಲ್ಲಿ ಸೀಮಿತ ಅವಧಿಯಲ್ಲಿ ಎಲ್‌ಇಡಿ ಟಿವಿಗಳ ಮೇಲೆ ಅತ್ಯಾಕರ್ಷಕ ಕೊಡುಗೆ ನೀಡಲಾಗುತ್ತಿದೆ.
22,990 ರೂ. ಮುಖಬೆಲೆಯ KORYO 32 ಇಂಚ್ ಎಲ್‌ಇಡಿ ಟಿವಿ ಕೇವಲ 8,888 ರೂ.ಗೆ ಲಭ್ಯವಿದೆ. 39,990 ರೂ. ಮುಖಬೆಲೆಯ 43 ಇಂಚ್ KORYO ಎಲ್‌ಇಡಿ ಟಿವಿಯನ್ನು ಕೇವಲ 17,777 ರೂ.ನಲ್ಲಿ ಖರೀದಿಸಬಹುದು. ಪೇಟಿಎಂ ಮೂಲಕ ಹೆಚ್ಚುವರಿ ಶೇ.10ರಷ್ಟು ಸಂಪೂರ್ಣ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.
ಫುಡ್ ವಿಭಾಗದಲ್ಲಿ ರಮಝಾನ್ ಪ್ರಯುಕ್ತ 1 ಕೆ.ಜಿ. ಬಾಸ್ಮತಿ ಅಕ್ಕಿ ಕೊಂಡರೆ 1ಕೆ.ಜಿ. ಅಕ್ಕಿ ಉಚಿತ, 580 ರೂ. ಮುಖಬೆಲೆಯ ತುಪ್ಪ ಕೇವಲ 399 ರೂ.ನಲ್ಲಿ ದೊರೆಯಲಿದೆ. 5 ಕೆ.ಜಿ. ಬಾಸ್ಮತಿ ಅಕ್ಕಿ, 5 ಕೆ.ಜಿ. ಗೋಧಿಹಿಟ್ಟು ಹಾಗೂ 3 ಲೀಟರ್ ಸನ್ ಪ್ಲವರ್ ಅಡುಗೆ ಎಣ್ಣೆಯು ಕೇವಲ 786 ರೂ.ನಲ್ಲಿ ದೊರೆಯಲಿದೆ.
18 ರೂ. ಮುಖಬೆಲೆಯ 500 ಮಿ.ಲೀ. ನಂದಿನಿ ಹಾಲು ಫ್ಯೂಚರ್ ಪೇ ಮೂಲಕ ಕೇವಲ 10ರೂ.ನಲ್ಲಿ ಖರೀದಿಸಬಹುದು. ಕೇವಲ 39 ರೂ.ನಲ್ಲಿ ತೊತಾಪುರಿ ಮಾವಿನಹಣ್ಣುಗಳನ್ನು ಖರೀದಿಸಬಹುದು. ಹೆಚ್ಚುವರಿ ಕೂಡುಗೆಗಳಿಗೆ ಅತ್ತಾವರ ಬಿಗ್ ಬಝಾರ್‌ಗೆ ಭೇಟಿ ನೀಡಲು ಪ್ರಕಟನೆ ತಿಳಿಸಿದೆ.





