ಬಂಟ್ವಾಳ: ಭಾರತೀಯ ಜೀವ ವಿಮಾ ಶಾಖೆ: ಬೀಳ್ಕೊಡುಗೆ-ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ : ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯಲ್ಲಿ ದುಡಿಯುವ ಮೂಲಕ ಸಾಮಾಜಿಕ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ಎಲ್ಲೈಸಿ ಶಾಖೆಯ ಹಿರಿಯ ಶಾಖಾಧಿಕಾರಿ ಕೆ.ಪ್ರೇಮನಾಥ ರಾವ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಎಲ್ಲೈಸಿ ಶಾಖೆಯಲ್ಲಿ ಸ್ಪೋಟ್ರ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ ಬಂಟ್ವಾಳ ಶಾಖೆಯಿಂದ ವರ್ಗಾವಣೆಗೊಳ್ಳುತ್ತಿರುವ ಆಡಳಿತಾಧಿಕಾರಿ ಶಶಿಕುಮಾರ್ ಮತ್ತು ಬೆಳ್ತಂಗಡಿ ಶಾಖಾಧಿಕಾರಿ ಯೋಗೇಂದ್ರ ಸಹಿತ ಭಡ್ತಿಗೊಂಡ ಮೆನೇಜರ್ ಎಡ್ಮಿನ್ ಜಯರಾಮ ನೆಲ್ಲಿತ್ತಾಯ ಅವರನ್ನು ಅಭಿನಂದಿಸಲಾಯಿತು.
ಸಹಾಯಕ ಆಡಳಿತಾಧಿಕಾರಿ ನಂದ ಕುಮಾರಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಮಧ್ವರಾಜ ಕಲ್ಮಾಡಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





