ವಿದ್ಯುತ್ ಆಘಾತದಿಂದ ಮೃತ್ಯು
ಮಣಿಪಾಲ, ಮೇ 31: ಅಡಿಕೆ ಕೊಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೇ 30ರಂದು ಅಪರಾಹ್ನ 3.15ರ ಸುಮಾರಿಗೆ ನಡೆದಿದೆ.
ಮೃತರನ್ನು ರಾಮಚಂದ್ರ ಪ್ರಭು(54) ಎಂದು ಗುರುತಿಸಲಾಗಿದೆ. ಇವರು ಮನೆಯ ಮೇಲೆ ಸ್ಲಾಬ್ನಿಂದ ಸ್ಟೀಲ್ ಮತ್ತು ಅಲ್ಯುಮೀನಿಯಂನಿಂದ ಕೂಡಿದ ಪೈಪ್‌ನಿಂದ ಅಡಿಕೆ ಮರದಿಂದ ಅಡಿಕೆಯನ್ನು ಕೊಯ್ಯುತ್ತಿದ್ದರು. ಈ ವೇಳೆ ಸ್ಲಾಬ್ಗೆ ಹತ್ತಿರವಿರುವ ವಿದ್ಯುತ್ ಕಂಬದಿಂದ ಹಾದು ಹೋಗಿರುವ ತಂತಿಗೆ ಪೈಪ್ ತಗುಲಿತ್ತೆನ್ನಲಾಗಿದೆ. ವಿದ್ಯುತ್ ಆಘಾತದಿಂದ ರಾಮಚಂದ್ರ ಪ್ರಭು ಅಸ್ವಸ್ಥರಾಗಿ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story





