ಗೃಹಪ್ರವೇಶಕ್ಕೆ ಆಕ್ಷೇಪ: ಯುವಕ ಆತ್ಮಹತ್ಯೆ
ಉಡುಪಿ, ಮೇ.31: ಮನೆ ಕಾಮಗಾರಿ ಪೂರ್ಣಗೊಳ್ಳದೆ ಗೃಹ ಪ್ರವೇಶ ಮಾಡಲು ಹೊರಟ ಮನೆಯವರ ನಿರ್ಧಾರದಿಂದ ನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಮೂಡುಸಗ್ರಿ ಕುಂಡೆಲುಪಾದೆ ಎಂಬಲ್ಲಿ ನಡೆದಿದೆ.
ಮೃತರನ್ನು ಮಣೋಳಿಗುಜ್ಜಿಯ ಅಜಯ್ ನಾಯಕ್ ಯಾನೆ ಗುಂಡು (32) ಎಂದು ಗುರುತಿಸಲಾಗಿದೆ. ಇವರ ಮನೆಯವರು ಆತ್ರಾಡಿ ಮದಗ ಎಂಬಲ್ಲಿ ಹೊಸ ಮನೆಯ ನಿರ್ಮಿಸುತ್ತಿದ್ದು, ಮನೆಯ ಕಾಮಗಾರಿ ಪೂರ್ಣ ಗೊಳ್ಳುವ ಮೊದಲೇ ಮನೆಯವರು ಗೃಹ ಪ್ರವೇಶ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಅಜಯ್ ನಾಯಕ್ ಮನೆಯವರ ನಿರ್ಧಾರದಿಂದ ಮನನೊಂದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಣಿಪಾಲದಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದನು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





