ಇಸ್ಪೀಟು ಜುಗಾರಿ: 14 ಮಂದಿ ಸೆರೆ
ಉಡುಪಿ, ಮೇ 31: ನಿಟ್ಟೂರು ಕಾಂಚನ ಹುಂಡೈ ಶೋರೂಂ ಹಿಂಬದಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ 14 ಮಂದಿಯನ್ನು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ನೇತೃತ್ವದ ತಂಡ ಮೇ 31ರಂದು ಸಂಜೆ ವೇಳೆ ಬಂಧಿಸಿದೆ.
ಬಂಧಿತರಿಂದ ಸುಮಾರು 86,800 ರೂ. ಮೊತ್ತದ ನಗದು, ಎರಡು ಕಾರು, ಐದು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





