ಪಿಎಂ ಕಿಸಾನ್ ಯೋಜನೆಯನ್ನು ಎಲ್ಲ ರೈತರಿಗೆ ವಿಸ್ತರಿಸಿದ ಮೋದಿ ಸರಕಾರ

ಹೊಸದಿಲ್ಲಿ, ಮೇ.31: ಮೋದಿ ಸರಕಾರ ಹಿಂದಿನ ಮಧ್ಯಂತರ ಬಜೆಟ್ನಲ್ಲಿ ಘೋಷಿಸಿದ್ದ 75,000 ಕೋಟಿ ರೂ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ದೇಶದ ಎಲ್ಲ ರೈತರಿಗೆ ವಿಸ್ತರಿಸುವ ನಿರ್ಧಾರಕ್ಕೆ ಶುಕ್ರವಾರ ನೂತನ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 6,000 ರೂ. ನೀಡಲಾಗುತ್ತದೆ. ಈ ಯೋಜನೆಯನ್ನು ದೇಶದ ಎಲ್ಲ ರೈತರಿಗೂ ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ ಅಂದಾಜು 12 ಕೋಟಿ ಸಣ್ಣ ಮತ್ತು 2 ಹೆಕ್ಟೇರ್ವರೆಗೆ ಜಮೀನು ಹೊಂದಿರುವ ಸೀಮಿತ ರೈತರಿಗೆ ವಾರ್ಷಿಕ ಮೂರು ಕಂತುಗಳಲ್ಲಿ 6,000ರೂ. ನೀಡಲಾಗುತ್ತದೆ. ಈ ಯೋಜನೆಯಡಿ ಈಗಾಗಲೇ 3.11 ಕೋಟಿ ಸಣ್ಣ ರೈತರು 2,000ರೂ.ನ ಮೊದಲ ಕಂತನ್ನು ಪಡೆದುಕೊಂಡಿದ್ದು 2.75 ಕೋಟಿ ರೈತರಿಗೆ ಎರಡನೆ ಕಂತಿನ ಹಣವೂ ದೊರಕಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸುತ್ತವೆ.
Next Story