ಶ್ರೀಲಂಕಾ 136ಕ್ಕೆ ಆಲೌಟ್

ಕಾರ್ಡಿಫ್, ಜೂ.1: ಶ್ರೀಲಂಕಾ ತಂಡ ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದು, 29.2 ಓವರ್‌ಗಳಲ್ಲಿ 136 ರನ್‌ಗಳಿಗೆ ಆಲೌಟಾಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡಕ್ಕೆ ನಾಯಕ ದಿಮುತ್ ಕರುಣರತ್ನೆ (ಔಟಾಗದೆ 52) ಮಾತ್ರ ಅರ್ಧಶತಕದ ಕೊಡುಗೆ ನೀಡಿದರು.
ವಿಕೆಟ್ ಕೀಪರ್ ಕುಸಾಲ್ ಪೆರೆರಾ (29), ತಿಸ್ಸರಾ ಪೆರೆರಾ(27) ಎರಡಂಕೆಯ ಸ್ಕೋರ್ ದಾಖಲಿಸಿದರು.
ನ್ಯೂಝಿಲೆಂಡ್‌ನ ಬೌಲರ್‌ಗಳಾದ ಮ್ಯಾಟ್ ಹೆನ್ರಿ(29ಕ್ಕೆ 3), ಲೋಕಿ ಫರ್ಗ್ಯುಸನ್ (22ಕ್ಕೆ 3), ಟ್ರೆಂಟ್ ಬೌಲ್ಟ್(44ಕ್ಕೆ 1), ಕಾಲಿನ್ ಡೆ ಗ್ರಾಂಡ್‌ಹೊಮ್ಮೆ (14ಕ್ಕೆ 1), ಜೇಮ್ಸ್ ನೆಶಮ್(21ಕ್ಕೆ 1), ಮಿಶೆಲ್ ಸ್ಯಾಟ್ನೆರ್(5ಕ್ಕೆ1) ದಾಳಿಗೆ ಸಿಲುಕಿ ಬೇಗನೆ ಆಲೌಟಾಗಿದೆ.
Next Story





