ಡಿವಿಎಸ್-ಪ್ರಿಯಾಂಕ್ ಖರ್ಗೆ ಟ್ವೀಟ್ ಸಮರ

ಬೆಂಗಳೂರು, ಜೂ.1: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಕೇಂದ್ರ ಗೃಹ ಸಚಿವರನ್ನಾಗಿ ನೇಮಕ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯ ಕ್ರಮವನ್ನು ಟ್ವಿಟರ್‌ನಲ್ಲಿ ಟೀಕಿಸಿರುವ ಸಚಿವ ಪ್ರಿಯಾಂಕ್ ಖರ್ಗೆಗೆ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದಾರೆ.
ನಾವು ಹೊಸ ಗೃಹ ಸಚಿವರನ್ನು ಹೊಂದಿದ್ದೇವೆ, ಗೃಹ ಸಚಿವಾಲಯವನ್ನು ಕ್ಲೀನ್ ಚಿಟ್ ನೀಡುವ ಸಚಿವಾಲಯವೆಂದು ಮರು ನಾಮಕರಣಗೊಳಿಸುವುದು ಸೂಕ್ತ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಪ್ರಿಯಾಂಕ್ ಖರ್ಗೆಯವರೇ, ಕೈ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳಬೇಡಿ, ನಿಮ್ಮ ಪಕ್ಷದ ಚಿನ್ನೆ ‘ಕೈ’ ಅದರ ಅವಲಕ್ಷಣ ದೇಶದ ಜನ ಹೇಳಿ 10 ದಿನವೂ ಆಗಿಲ್ಲ. ಆಗಲೇ ಶುರು ಮಾಡಿದ್ರಲ್ಲ ನಿಮ್ಮ ಹಿರಿಯಕ್ಕನ ಚಾಳಿ. ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ, ಆಮೇಲೆ ಊರು ಉಸಾಬರಿಗೆ ಬರುವಿರಂತೆ ಎಂದು ಟ್ವೀಟ್ ಮಾಡಿದ್ದಾರೆ.
Next Story





