ಮಂಗಳೂರು: ವಿಶ್ವ ತಂಬಾಕು ರಹಿತ ದಿನಾಚರಣೆ

ಮಂಗಳೂರು, ಜೂ.1: ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ಮಂಗಳೂರು ಮತ್ತು ಕಂಕನಾಡಿ ಯುವಕ ವೃಂದಗಳ ಜಂಟಿ ಆಶ್ರಯದಲ್ಲಿ ‘ವಿಶ್ವ ತಂಬಾಕು ರಹಿತ ದಿನಾಚರಣೆ’ ಕಾರ್ಯಕ್ರಮ ವನ್ನು ನಗರದ ಕದ್ರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸಿಪಿ ಸುಧೀರ್ ಹೆಗ್ಡೆ ಯುವ ಜನತೆಯನ್ನುದ್ದೇಶಿಸಿ ಮಾತನಾಡಿ, ತಂಬಾಕು ಉತ್ಪನ್ನ ದುಷ್ಪರಿಣಾಮ ಮತ್ತು ಕಾನೂನಾತ್ಮಕ ಕ್ರಮ ಹಾಗೂ ಯುವ ಜನರು ಯಾವ ರೀತಿಯಲ್ಲಿ ತಡೆಯಬಹುದು ಎಂದು ಮಾಹಿತಿ ನೀಡಿದರು.
ನೆಹರೂ ಯುವ ಕೇಂದ್ರ ಮಂಗಳೂರು ಇದರ ಜಿಲ್ಲಾ ಸಮನ್ವಯ ಅಧಕಾರಿ ರಘುವೀರ್ ಸೂಟರ್‌ಪೇಟೆ, ಯುವಕರು ತಂಬಾಕು ಉತ್ಪನ್ನಗಳ ಅಪಾಯದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ವ್ಯಸನಮುಕ್ತ ಸಮಾಜ ಹಾಗೂ ಯುವ ಸಂಪತನ್ನು ರಕ್ಷಿಸುವ ಕಾರ್ಯಕ್ಕೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಬಾಲಕೃಷ್ಣ ವಹಿಸಿದ್ದರು. ಕಂಕನಾಡಿ ಯುವಕ ವೃಂದದ ಉಪಾಧ್ಯಕ್ಷ ಹೇಮಚಂದ್ರ ಗರೋಡಿ, ಉಪನ್ಯಾಸಕ ಶಿವಕುಮಾರ್ ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೋಕೇಶ್ ನಿರೂಪಿಸಿದರು.






.jpg)
.jpg)

