ಎನ್‌ಎಂಪಿಟಿಯಲ್ಲಿ ವಿಶ್ವ ತಂಬಾಕು ದಿಣಾಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಮಂಗಳೂರು, ಜೂ.1: ನವಮಂಗಳೂರು ಬಂದರು ಮಂಡಳಿ ಮತ್ತು ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ನವಮಂಗಳೂರು ಬಂದರು ಕಾರ್ಮಿಕರ ವಿಭಾಗದಲ್ಲಿ ಶುಕ್ರವಾರ ಉಚಿತ ದಂತ ತಪಾಸಣೆ ಮತ್ತು ಬೀದಿ ನಾಟಕದ ಮೂಲಕ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸಮಾರಂಭದಲ್ಲಿ ಟ್ರಾಫಿಕ್ ಮ್ಯಾನೇಜರ್ ವೈ.ಆರ್.ಬೆಳಗಲಿ ಮುಖ್ಯ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸಲು,ಉಪ ಟ್ರಾಫಿಕ್ ಮ್ಯಾನೇಜರ್ ವನೀತ್ ಕುಮಾರ್, ಡಿಟಿಎಮ ಸತೀಶ್ ಕುಮಾರ್, ಪ್ರಮೋದ್ ಕುಮಾರ್ ದಾಸ್, ಅಸಿಸ್ಟೆಂಟ್ ಡೈರೆಕ್ಟರ್ ಇನ್ಸ್‌ಪೆಕ್ಟರ್ ಆಫ್ ಸೇಫ್ಟಿಮಿಲಿಂದ್ ಭಾರತೇ, ಪ್ರೊ. ಶಿಲ್ಪಾ ಮೊದಲಾದವರು ಉಪಸ್ಥಿತರಿದ್ದರು.
ಬಂದರು ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರುವಾಹನ ಚಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story







