ಈದ್ ದಿನ ನೀರು ವ್ಯತ್ಯಯವಾಗದಂತೆ ಪೂರೈಸಿ: ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಮನವಿ
ಮಂಗಳೂರು, ಜೂ.1: ಪ್ರಸಕ್ತ ಸಾಲಿನ ಈದ್ ಹಬ್ಬವು ಸಂಭಾವ್ಯ ಜೂ.4 ಅಥವಾ 5ರಂದು ಜರುಗಲಿದ್ದು, ಅಂದು ನಗರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ನೀರು ಸರಬರಾಜು ಮಾಡಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮನಪಾ ವ್ಯಾಪ್ತಿಯಲ್ಲಿ ನೀರಿನ ಕೊರತೆ ಕಾರಣದಿಂದ ಪಾಲಿಕೆಯು ನೀರಿನ ಬಿಡುಗಡೆಯ ದಿನಾಂಕವನ್ನು ನಿಗದಿಗೊಳಿಸಿದೆ. ಈಗಾಗಲೇ ನೀರು ಬಿಡುಗಡೆಯ ದಿನಾಂಕವನ್ನು ಸರಿದೂಗಿಸಿಕೊಳ್ಳಲಾಗುತ್ತಿದೆ. ಮುಸ್ಲಿಮ್ ಸಮುದಾಯವು ಈದ್ ಆಚರಿಸಲು ಸಮರ್ಪಕ ನೀರು ಸರಬರಾಜು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಆ ದಿನದಂದು ವಿಶೇಷ ಪ್ರಾರ್ಥನೆಗಳು, ಮಸೀದಿ ಭೇಟಿ ಒತ್ಯಾದಿ ಕಾರ್ಯಕ್ರಮಗಳನ್ನು ಒಳಗೊಂಡಿರುವುದರಿಂದ ಅಂದು ಸಾರ್ವಜನಿಕರಿಗೆ ನೀರು ವ್ಯತ್ಯಯವಾಗದಂತೆ ಪೂರೈಕೆ ಮಾಡಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದಾರೆ.
Next Story





