ಆರೋಗ್ಯವಂತ ಸಮಾಜಕ್ಕಾಗಿ ತಂಬಾಕಿನಿಂದ ದೂರ ಇರಬೇಕು-ಸುಧೀರ್ ಹೆಗ್ಡೆ
ಮಂಗಳೂರು, ಜೂ.1: ಆರೋಗ್ಯವಂತ ಸಮಾಜದ ನಿರ್ಮಾಣದ ದೃಷ್ಟಿಯಿಂದ ಯುವಜನರು ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗ್ಡೆ ತಿಳಿಸಿದ್ದಾರೆ.
ಅವರು ನಗರದ ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು ಇವರ ಆ ಶ್ರಯದಲ್ಲಿ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಮಂಗಳೂರು ಮತ್ತು ಕಂಕನಾಡಿ ಯುವಕ ವೃಂದ (ರಿ)ಮಂಗಳೂರು ಇದರ ಆಶ್ರಯದಲ್ಲಿ ಕದ್ರಿ ಮಹಿಳಾ ತರಬೇತಿ ಸಂಸ್ಥೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಸಾರ್ವಜನಿಕ ವಲಯದಲ್ಲಿ ತಂಬಾಕು ಸೇವಿಸುವುದ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳಲು ಇರುವ ಅವಕಾಶದ ಮಿತಿಗಳನ್ನು ಸುಧೀರ್ ಹೆಗ್ಡೆ ತಿಳಿಸಿದರು.ತಂಬಾಕು ಸೇವನೆಯ ವಿರುದ್ಧ ಸಮಾಜದ ಎಲ್ಲಾ ವರ್ಗದಲ್ಲೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಸುಧೀರ್ ಹೆಗ್ಡೆ ತಿಳಿಸಿದರು.ಸಮಾರಂಭದಲ್ಲಿ ನೆಹರು ಯುವಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆ ಮಾತನಾಡುತ್ತಾ, ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ ಆ ಸಮಾಜ ದುಶ್ಚಟಗಳಿಂದ ಮುಕ್ತವಾಗಿರಬೇಕು ಎಂದರು.
ಕದ್ರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪೊಆಲ ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.ಉಪನ್ಯಾಸಕ ಶಿವ ಕುಮಾರ್, ಕಂಕನಾಡಿ ಯುವಕ ವೃಂದದ ಉಪಾಧ್ಯಕ್ಷ ಹೇಮ ಚಂದ್ರಗರೋಡಿ ಮೊದಲಾದವರು ಉಪಸ್ಥಿತರಿದ್ದರು.







