ಜೂ.3: ಕುಕ್ಕೆಹಳ್ಳಿ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ
ಉಡುಪಿ, ಜೂ.1: ಮಳೆ, ಬೆಳೆ ಸೇರಿದಂತೆ ನಾಡಿನ ಸುಬಿಕ್ಷೆಗಾಗಿ ಪ್ರಾರ್ಥಿಸಿ ಜೂ.3ರ ಸೋಮವಾರ ಬೆಳಗ್ಗೆ 8:00ಗಂಟೆಗೆ ಕುಕ್ಕೆಹಳ್ಳಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಲಿಂಗೇಶ್ವರನಿಗೆ ವಿಶೇಷ ಪ್ರಾರ್ಥನೆ ಮತ್ತು ಸೀಯಾಶಾಭಿಷೇಕ ಸೇವೆ ನಡೆಯಲಿದೆ.
ಭಕ್ತಾಭಿಮಾನಿಗಳು ಈ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಅಭಿಷೇಕಕ್ಕೆ ಸೀಯಾಳ ನೀಡಲು ಬಯಸುವವರು ರವಿವಾರ ಸಂಜೆ 6 ಗಂಟೆಯ ಒಳಗೆ ದೇವಸ್ಥಾನಕ್ಕೆ ತಲುಪಿಸಬೇಕೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Next Story





