ಬೊರಿಸ್ ಜಾನ್ಸನ್ ಬ್ರಿಟನ್ಗೆ ಉತ್ತಮ ಪ್ರಧಾನಿ ಆಗಬಲ್ಲರು: ಟ್ರಂಪ್
ಲಂಡನ್, ಜೂ. 1: ಬ್ರಿಟನ್ನ ಮಾಜಿ ವಿದೇಶ ಸಚಿವ ಬೊರಿಸ್ ಜಾನ್ಸನ್, ತೆರೇಸಾ ಮೇ ಅವರ ಸ್ಥಾನದಲ್ಲಿ ಆ ದೇಶದ ‘ಅತ್ಯುತ್ತಮ’ ಪ್ರಧಾನಿಯಾಗುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಬ್ರಿಟನ್ಗೆ ಭೇಟಿ ನೀಡುವ ಮುನ್ನ ಈ ಹೇಳಿಕೆ ನೀಡಿದ್ದಾರೆ. ಅವರು ಸೋಮವಾರ ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ಪ್ರಕ್ರಿಯೆಗೆ ಸಂಬಂಧಿಸಿದ ಒಪ್ಪಂದವೊಂದನ್ನು ರೂಪಿಸಲು ವಿಫಲರಾಗಿರುವ ಹಿನ್ನೆಲೆಯಲ್ಲಿ, ತೆರೇಸಾ ಜೂನ್ 7ರಂದು ರಾಜೀನಾಮೆ ನೀಡಲಿದ್ದಾರೆ.
Next Story