ವಿರಾಟ್ ಕೊಹ್ಲಿ ಅಪ್ರಬುದ್ಧ ಎಂದ ದ.ಆಫ್ರಿಕದ ವೇಗಿ ರಬಾಡ!

ಲಂಡನ್, ಜೂ.2: ಭಾರತದ ನಾಯಕ ವಿರಾಟ್ ಕೊಹ್ಲಿ ಮೈದಾನದೊಳಗೆ ಸಿಟ್ಟನ್ನು ಹೊರಹಾಕುತ್ತಾರೆ. ಎದುರಾಳಿ ತನ್ನ ಸಿಟ್ಟನ್ನು ಪ್ರದರ್ಶಿಸಿದಲು ನಿರ್ಧರಿಸಿದಾಗ ಅದನ್ನು ಅವರು ಸ್ವೀಕರಿಸುವುದಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಅವರ ವರ್ತನೆ ಅವರನ್ನು ಅಪ್ರಬುದ್ಧರನ್ನಾಗಿ ಮಾಡುತ್ತಿದೆ ಎಂದು ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡ ಹೇಳಿದ್ದಾರೆ.
‘‘ನಾನು ಗೇಮ್ ಪ್ಲಾನ್ ಬಗ್ಗೆ ಮಾತ್ರ ಯೋಚಿಸುತ್ತೇನೆ. ಆದರೆ, ವಿರಾಟ್ ನನ್ನ ಎಸೆತವನ್ನು ಬೌಂಡರಿಗೆ ಬಾರಿಸಿದ ಬಳಿಕ ಏನೋ ಹೇಳುತ್ತಾರೆ. ಆಗ ನಾವು ಮರು ಮಾತನಾಡಿದರೆ ಅವರಿಗೆ ಕೋಪ ಬರುತ್ತದೆ. ಅವರೊಬ್ಬ ವಿಶ್ವಶ್ರೇಷ್ಠ ಆಟಗಾರ. ಆದರೆ, ನಿಂದನೆಯನ್ನು ಸ್ವೀಕರಿಸುವುದಿಲ್ಲ’’ ಎಂದು ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ಧ ಆಡಿದ್ದ ರಬಾಡ ಹೇಳಿದ್ದಾರೆ.
ಬುಧವಾರ ಸೌಥಾಂಪ್ಟನ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕಿಂತ ಮೊದಲು ರಬಾಡ ಈ ಹೇಳಿಕೆ ನೀಡಿ ಮೈಂಡ್‌ಗೇಮ್ ಆರಂಭಿಸಿದ್ದಾರೆ. .
Next Story





