ಕುತ್ತಾರ್ ಡಿವೈಎಫ್‌ಐನಿಂದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಉಳ್ಳಾಲ, ಜೂ.2: ಮುನ್ನೂರು ಗ್ರಾಮದ ಕುತ್ತಾರ್ ಬಟ್ಟೆದಡಿ ಡಿವೈಎಫ್‌ಐ ಘಟಕದ ವತಿಯಿಂದ ರವಿವಾರ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ತೇವುಲದಲ್ಲಿ ನಡೆಯಿತು.
ಈ ಸಂದರ್ಭ ಉಳ್ಳಾಲ ವಲಯ ಡಿವೈಎಫ್‌ಐ ಮುಖಂಡ ಅಶ್ರಫ್ ಕೆಸಿ ರೋಡ್, ಶಿಕ್ಷಕಿ ಚಿತ್ರಾ ಕಬೆಕೋಡಿ , ಸಿಪಿಎಂ ಮುಖಂಡ ವಿಶ್ವನಾಥ್ ತೇವುಲ, ಡಿವೈಎಫ್‌ಐ ಮುಖಂಡ ಸುನಿಲ್ ತೇವುಲ, ನಿತಿನ್ ಕುತ್ತಾರ್ , ಶ್ರವಣ್ ತೇವುಲ , ಮಹಾಬಲ ದೆಪ್ಪಲಿಮಾರ್, ದಿವ್ಯರಾಜ್ ತೇವುಲ ಉಪಸ್ಥಿತರಿದ್ದರು.
ವಿಕಾಸ್ ಕುತ್ತಾರ್ ಸ್ವಾಗತಿಸಿದರು. ಸಾಂಕೇತ್ ಕಂಪ ವಂದಿಸಿದರು.
Next Story





