ಬೈಕ್ - ಟೆಂಪೋ ನಡುವೆ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು
ಭಟ್ಕಳ: ಇಲ್ಲಿನ ತೆರ್ನಮಕ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಚರ್ಚ್ ಕ್ರಾಸ್ ಬಳಿ ಬೈಕ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮೃತರನ್ನು ಬೆಂಗ್ರೆ ಸಣಬಾವಿ ನಿವಾಸಿ ಕೃಷ್ಣ ಮಂಜುನಾಥ ನಾಯ್ಕ (60), ಗಣೇಶ್ ನಾರಾಯಣ ನಾಯ್ಕ (40) ಎಂದು ಗುರುತಿಸಲಾಗಿದ್ದು, ಕೃಷ್ಣ ಬೈರ ನಾಯ್ಕ (35) ಗಂಭೀರವಾಗಿ ಗಾಯಗೊಂಡವರು ಎಂದು ತಿಳಿದುಬಂದಿದೆ.
ಮೂವರು ಬಸ್ತಿಯಿಂದ ಸಣಬಾವಿ ಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಭಟ್ಕಳದ ಮುಂಡಳ್ಳಿಯ ಅಪಾಯಕಾರಿ ತಿರುವಿನಿಂದಾಗಿ ಅಪಘಾತ ಸಂಭವಿಸಿದೆ.
ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





