ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಕಲಾವಿದ ಸಮಾಜದ ಶ್ರೇಷ್ಠ ಸಂಪತ್ತು -ಡಾ.ಪ್ರಭಾಕರ ಜೋಶಿ
ಯಕ್ಷ ಧ್ರುವ ಪಟ್ಲ ಫೌಂಡೇಶನ್‌ನ ‘ಪಟ್ಲ ಸಂಭ್ರಮ 2019’

ಮಂಗಳೂರು, ಜೂ. 2: ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಕಲಾವಿದ ಸಮಾಜದ ಶ್ರೇಷ್ಠ ಸಂಪತ್ತು ಎಂದು ಡಾ. ಪ್ರಭಾಕರ ಜೋಶಿ ತಿಳಿಸಿದ್ದಾರೆ.
ಅಡ್ಯಾರ್ ಗಾರ್ಡನ್ ನ ಸಭಾಂಗಣದಲ್ಲಿ ಹಮ್ಮಿಕೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 2019 ಕಾರ್ಯಕ್ರಮದಲ್ಲಿ ಪಟ್ಲ ಪ್ರಶಸ್ತಿ ಸ್ವೀಕರಿಸಿ ಅವರು ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪಟ್ಲ ಸತೀಶ್ ಭಾಗವತರ ನೇತೃತ್ವದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಯಕ್ಷಗಾನಕ್ಕೆ ಕಾರಂತರು ಕೊಟ್ಟ ಮಾರ್ಗಸೂಚಿಯನ್ನು ಗಮನಿಸಬೇಕು. ಯಕ್ಷಗಾನ ಶ್ರೀಮಂತ ಕಲೆ ಅದಕ್ಕೆ ಇನ್ಯಾವುದೋ ಫ್ಯಾನ್ಸಿ ರಂಗದಿಂದ ಪಡೆದುಕೊಳ್ಳಬೇಕಾಗಿಲ್ಲ. ಯಕ್ಷಗಾನ ವಿಶ್ವ ರಂಗಭೂಮಿಯ ನ್ನು ಸರಿಗಟ್ಟಿಸುವ ನೆಲೆಯಲ್ಲಿ ಬೆಳೆಯಬೇಕಾಗಿದೆ ಎಂದು ಶುಭ ಹಾರೈಸಿದರು.
ಡಾ. ಪ್ರಭಾಕರ ಜೋಶಿಯವರಿಗೆ 2019ರ ಪಟ್ಲ ಪ್ರಶಸ್ತಿಯನ್ನು ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಟ್ಲ ಫೌಂಡೇಶನ್ ಟ್ರಸ್ಟನ ಸದಸ್ಯರು ಹಾಗೂ ಸಮಾರಂಭದ ಅತಿಥಿಗಳು ಪ್ರಶಸ್ತಿ ಒಂದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ವಿತರಿಸಿ ಶುಭ ಹಾರೈಸಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಯಕ್ಷಗಾನದಲ್ಲಿ ಮಾತು, ಕುಣಿತ, ಹಾಡು ಸೇರಿದಂತೆ ಮನುಷ್ಯನ ಮಾನಸಿಕ ದೈಹಿಕ ವಿಕಾಸಕ್ಕೆ ಅವಕಾಶವಿದೆ .ಇದರಿಂದಾಗಿ ಕಲೆಯೊಂದಿಗೆ ಮನೋರಂಜನೆಯ ಜೊತೆ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಸತೀಶ್ ಶೆಟ್ಟಿಯ ನೇತ್ರತ್ವದ ಪಟ್ಲ ಫೌಂಡೇಶನ್‌ನ ಕೆಲಸ ಶ್ಲಾಘನೀಯ ಎಂದರು.ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀಕ್ಷೇತ್ರ ಹೊರನಾಡು ಶ್ರೀ ಅಂಬಿಕಾ ಅನ್ನಪೂಣೇಶ್ವರ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ ಹರ್ಷೇಂದ್ರ ಕುಮಾರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವ ನಾಥ ಶೆಟ್ಟಿ, ಉದ್ಯಮಿ ಕೆ.ಡಿ.ಶೆಟ್ಟಿ,ಉದ್ಯಮಿ ಸೌಂದರ್ಯ ಮಂಜಪ್ಪ , ವಿಜೇಂದ್ರ ಭಟ್, ವಿಕಾಸ್ ಶೆಟ್ಟಿ , ಸಂತೋಷ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ, ಪ್ರಕಾಶ್ ಶೆಟ್ಟಿ ಬಂಜಾರ, ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಬಾಲಕೃಷ್ಣ ಶೆಟ್ಟಿ ಉದ್ಯಮಿ, ಕರ್ನೂರು ಮೋಹನ್ ರೈ, ಮುರಳಿ ಕೃಷ್ಣ ಪೊಳಲಿ, ಉಪೇಂದ್ರ ಶೆಟ್ಟಿ, ಗುಣಶೀಲ ಶೆಟ್ಟಿ,ಶಶಿಧರ ಮಲ್ಲಾರ್, ರಾಜೀವ ಪೂಜಾರಿ ಕೈಕಂಬ, ಪ್ರವೀಣ್ ಶೆಟ್ಟಿ ವಕ್ವಾಡಿ, ಗೋಪಾಲ ಶೆಟ್ಟಿ ಬಹರೈನ್, ಉದಯ ಕುಮಾರ್ ಶೆಟ್ಟಿ ಮುನಿಯಾಲ, ಅಶೋಕ್ ಶೆಟ್ಟಿ ಪೆರ್ಮುದೆ, ಪ್ರದೀಪ್ ಆಳ್ವ, ಸುಧಾಕರ ಪೂಂಜ, ಡಾ.ಮನು ರಾವ್, ಗಿರೀಶ್ ಶೆಟ್ಟಿ, ಮಹಾಬಲ ಶೆಟ್ಟಿ, ರೂಪ ದರ್ಶಿ ರಕ್ಷಿತಾ ಶೆಟ್ಟಿ , ನಟ ಭೋಜರಾಜ ವಾಂಜೂರು, ಮಹಾಬಲ ಶೆಟ್ಟಿ, ಕಲಾವಿದ ಎಂ.ಎಲ್.ಸಾಮಗ, ಶ್ರೀಮತಿ ಸುಚೇತಾ ಜೋಶಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಯಕ್ಷಗಾನ ಕಲಾವಿದರಾದ ಪೆರುವಾಯಿ ನಾರಾಯಣ ಭಟ್, ಕಂದಾವರ ರಘುರಾಮ ಶೆಟ್ಟಿ,ಕೈರಂಗಳ ನಾರಾಯಣ ಹೊಳ್ಳ,ಶ್ರೀಮತಿ ದಯಾಮಣಿ. ಎಸ್.ಶೆಟ್ಟಿ,ಬಂಟ್ವಾಳ ಜಯರಾಮ ಆಚಾರ್ಯ,ಐರೋಡಿ ಗೋವಿಂದಪ್ಪ,ವೆಂಕಪ್ಪ ಮಾಸ್ಟರ್, ರತ್ನಾ ಕೆ.ಭಟ್ ತಲೆಂಜೇರಿಯವರಿಗೆ ಯಕ್ಷಧ್ರುವ ಕಲಾ ಗೌರವ 2019 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಶಕ್ತ ಕಲಾವಿದರ ಕುಟುಂಬ ಯೋಜನೆಯ ಅಂಗವಾಗಿ ಅಡೂರು ಗಣೇಶ್ ರಾವ್, ಆನಂದ ಪುರುಷ ,ದಿನೇಶ್ ಸರಪಾಡಿ,ಪ್ರಭಾಕರ ಗೋರೆ, ಚಂದ್ರ ಹಾಸ ಉಡುಗೋಡು,ಶಾಂತರಾಮ,ಪ್ರಸನ್ನ ಆಚಾರಿ,ಮಾದವ ಆಚಾರ್ಯ,ಮುಂಡ್ಕೂರು ಕೃಷ್ಣ ಶೆಟ್ಟಿ ,ಮೂಡಂಬೈಲು ಗೋಪಾಲ ಶಾಸ್ತ್ರಿ,ಕಾವ್ಯ ಶ್ರೀ ಮೊದಲಾದವರ ಕುಟುಂಬಕ್ಕೆ ತಲಾ 50ಸಾವಿರ ದಂತೆ ಸಹಾಯಧನ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಅಶಕ್ತ ಕಲಾವಿದ ಶ್ರೀಧರ ಗೌಡರಿಗೆ ಗಾಲಿ ಖುರ್ಚಿ ಹಾಗೂ 15 ಸಾವಿರ ರೂ ನಗದು ನೀಡಿ ಗೌರವಿಸಲಾಯಿತು. 13 ಕಲಾವಿದರಿಗೆ ತಲಾ 25 ಸಾವಿರ ರೂ ನಂತೆ ನೀಡಿ ಗ್ರಹ ನಿರ್ಮಾಣಕ್ಕೆ ಸಹಾಯ ಧನ ನೀಡಲಾಯಿತು. ಕಲಾವಿದ ಗಣೇಶ್ ಕೊಲಕಾಡಿ ರೂ 50ಸಾವಿರ , ರಾಜೇಶ್ ಆಚಾರ್ಯ ರೂ 15 ಸಾವಿರ ಆರೋಗ್ಯ ಚಿಕಿತ್ಸೆಗಾಗಿ ಸಹಾಯಧನ ನೀಡಲಾಯಿತು, 250 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ,ಚಿನ್ನದ ಪದಕ ನೀಡಲಾಯಿತು.ಕದ್ರಿ ನವನೀತ ಶೆಟ್ಟಿ,ಭಾಸ್ಕರ ರೈ ಕುಕ್ಕುವಳ್ಳಿ ,ಕೃಷ್ಣ ಶೆಟ್ಟಿ ತಾರೆಮಾರ್,ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.
ಯಕ್ಷ ಧ್ರುವ ಪಟ್ಲ ಪೌಂಡೇಶನ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು.ಅಫಘಾತ ವಿಮೆಯೋಜನೆಯ ಮೂಲಕ ದಿವಂಗತ ದಿನೇಶ್ ಮಡಿವಾಳರಿಗೆ 8 ಲಕ್ಷದ ಪರಿಹಾರ ನೀಡಲಾಯಿತು. ಪೂರ್ಣೇಶ್ ಆಚಾರ್ಯ ರಿಗೆ ಚಿಕಿತ್ಸಾ ವೆಚ್ಚವಾಗಿ 51 ಸಾವಿರ ರೂ ಪಟ್ಲ ಫೌಂಡೇಶನ್ ಹಾಗೂ ವಿಮಾ ಸಂಸ್ಥೆಯ ಮೂಲಕ ವಿತರಿಸಲಾಯಿತು.
ಯಕ್ಷ ಧ್ರುವ ಪಟ್ಲ ಸಂಭ್ರಮದಲ್ಲಿ ಅಬ್ಬರ ತಾಳ,ಯಕ್ಷ ಸಪ್ತ ಸ್ವರ,ನೃಥ್ಯ ವರ್ಷ ದರ್ಶನ,ನಾಟ್ಯ ವೈಭವ,ತಾಳಮದ್ದಳೆ, ಯಕ್ಷಗಾ ನೃತ್ಯ ಮೊದಲಾದ ಕಾರ್ಯಕ್ರಮ ನಡೆಯಿತು.














