ಜುಗಾರಿ: ಮೂವರ ಬಂಧನ
ಕುಂದಾಪುರ, ಜೂ.2: ಕಂದಾವರ ಗ್ರಾಮದ ಉಳ್ಳೂರು ಜನತಾ ಕಾಲೋನಿ ಬಳಿ ಜೂ.2ರಂದು ಬೆಳಗ್ಗೆ ಅಂದರ್ ಬಾಹರ್ ಎಂಬ ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಗಾ್ರಮಾಂತರ ಪೊಲೀಸರು ಬಂಧಿಸಿದ್ದಾರೆ.
ಗುರುರಾಜ್, ಗೋಪಾಲ ಹಾಗೂ ಮಂಜುನಾಥ ಬಂಧಿತ ಆರೋಪಿಗಳು. ಇವರಿಂದ 3150 ನಗದು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ 7 ಜನರು ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





