ಕನ್ನಡದ ಜತೆ ಆಂಗ್ಲ ಮಾಧ್ಯಮ ಅಗತ್ಯ: ಮಿನಾಕ್ಷಿ ಶಾಂತಿಗೋಡು

ಮಂಗಳೂರು, ಜೂ. 3: ಮಕ್ಕಳಿಗೆ ಕನ್ನಡದ ಜತೆ ಆಂಗ್ಲ ಮಾಧ್ಯಮದ ಶಿಕ್ಷಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮಕಾರಿ ವ್ಯವಸ್ಥೆಗಳು ಅಗತ್ಯ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಕರಂಬಾರು ಹಳೆ ವಿದ್ಯಾರ್ಥಿ ಸಂಘ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಎಲ್‌ಕೆಜಿ, ಯುಕೆಜಿ (ಚಿನ್ನರ ಬಣ್ಣದ ಅಕ್ಷರ ಮನೆ) ಹಾಗೂ ಸರಕಾರಿ ಆಂಗ್ಲ ಮಾಧ್ಯಮ ಶಾಲೆ 6ನೆ ತರಗತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುಕೆಜಿ ಹಾಗೂ ಎಲ್‌ಕೆಜಿ ಕೊಠಡಿ ಉದ್ಘಾಟಿಸಿ ಮತನಾಡಿದ ಅವರು, ಇನ್ನಷ್ಟು ಪೂರಕ ಬದಲಾವಣೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಕರಂಬಾರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ ವಹಿಸಿದ್ದರು.
ಸಂಘದ ಗೌರವ ಸಲಹೆಗಾರ ಕೃಷ್ಣಾನಂದ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯೋಪಾದ್ಯಾಯಿನಿ ಎ. ಚಂದ್ರಕಲಾ ಸ್ವಾಗತಿಸಿದರು. ರಾಕೇಶ್ ಕುಂದರ್ ವಂದಿಸಿದರು.
Next Story









