ಹಿದಾಯತ್‍ನಗರ ಎಸ್ಸೆಸ್ಸೆಫ್ ವತಿಯಿಂದ ಪುಸ್ತಕ ವಿತರಣೆ
ಉಳ್ಳಾಲ : ಜೀವನದಲ್ಲಿ ಶಿಕ್ಷಣ ಪಡೆದಾಗ ಶಿಸ್ತಿನೊಂದಿಗೆ ಇಸ್ಲಾಂ ತಿಳಿಸಿ ರೀತಿಯಲ್ಲಿ ಜೀವನ ನಡೆಸಲು ಸಾಧ್ಯ, ಈ ನಿಟ್ಟಿನಲ್ಲಿ ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ ಎನಿಸಿದೆ ಎಂದು ಹಿದಾಯತ್ ನಗರ ಜುಮಾ ಮಸೀದಿಯ ಅಧ್ಯಕ್ಷ ಉಮರ್ ಮಾಸ್ಟರ್ ಅಭಿಪ್ರಾಯಪಟ್ಟರು.
ಹಿದಾಯತ್ ನಗರ ಎಸ್ಸೆಸ್ಸೆಫ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಮಕ್ಕಳೂ ಜೀವನದಲ್ಲಿ ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವುದು ಅತಿಮುಖ್ಯ. ವಿದ್ಯೆಗೆ ನೀಡುವ ದಾನ ಶಾಶ್ವತವಾಗಿರುತ್ತದೆ. ಈ ಕಾರ್ಯದಲ್ಲಿ ಎಸ್ಸೆಸ್ಸೆಫ್ ಮುಂಚೂಣಿಯಲ್ಲಿದೆ. ಇಂತಹ ಸೇವೆ ನಿರಂತರ ಮುಂದುವರೆಯಬೇಕು ಎಂದು ಆಶಿಸಿದರು.
ಹಿದಾಯತ್ ನಗರ ಎಸ್ಸೆಸ್ಸೆಫ್ ಹಿದಾಯತ್ ಅಧ್ಯಕ್ಷ ಶಬೀರ್ ಅಶ್‍ಅರಿ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಹ್ಮದ್ ಕಬೀರ್ ಸಅದಿ ಉಳ್ಳಾಲ ದುವಾ ಮಾಡಿದರು. ಮದರಸ ಮುಅಲ್ಲಿಂ ಅಶ್ರಫ್ ಅಮ್ಜದಿ, ಉಪಾಧ್ಯಕ್ಷ ಝುಬೈರ್ ಝುಹ್ರಿ, ಮಸೀದಿಯ ಕಾರ್ಯದರ್ಶಿ ಎಸ್.ಝಾಕಿರ್, ಕೋಶಾಧಿಕಾರಿ ಸುಲೈಮಾನ್ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.
ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಲಿಬಾನ್ ಮರ್ಝಾಕಿ ವಂದಿಸಿದರು.





