ಜೂ.5: ಮಾಧವ ಆಚಾರ್ಯರ ಪ್ರವಾಸ ಕಥನ ಬಿಡುಗಡೆ
ಉಡುಪಿ, ಜೂ.3: ಜಿಲ್ಲಾ ವಕೀಲರ ಸಂಘ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಅಲೆವೂರು ಮಾಧವ ಆಚಾರ್ಯ ಅವರ ಪ್ರವಾಸ ಕಥನ ‘ಹಿಂದೂ ದೇವಾಲಯಗಳ ಮುಸ್ಲಿಂ ರಾಷ್ಟ್ರ ಇಂಡೋನೇಶಿಯ’ ಮತ್ತು ‘ಭೂಲೋಕದ ಐಸಿರಿ ಸಿಂಗಾಪುರ’ ಕೃತಿ ಜೂ.5ರ ಶನಿವಾರ ಅಪರಾಹ್ನ 3 ಗಂಟೆಗೆ ನಗರದ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಇಂಡೋನೇಶಿಯದ ರಾಮಮೋಹನ್ ಕಾಮತ್ ಕೃತಿ ಬಿಡುಗಡೆಗೊಳಿಸಲಿ ದ್ದಾರೆ. ಡಾ.ಮಹಾಬಲೇಶ್ವರ ರಾವ್ ಕೃತಿಯ ಕುರಿತು ಮಾತನಾಡಲಿದ್ದಾರೆ. ಕೊಯಮುತ್ತೂರಿನ ನಿವೃತ್ತ ಜಿಲ್ಲಾ ನ್ಯಾಯಾಧೀಶ ಜೆ.ವಿ.ರಾಜ್ ಮತ್ತು ಜಮ್ಮು ಗೋ ಏರ್‌ಲೈನ್ಸ್ ಸಂಸ್ಥೆ ವ್ಯವಸ್ಥಾಪಕ ಬಿ.ಎನ್ ಸೊಹಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





